ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿದ ದಲಿತ ನಾಯಕರು- ರಸ್ತೆಯನ್ನು ಸಂಪರ್ಕ ಮುಕ್ತಗೊಳಿಸಿದ್ದಕ್ಕೆ ವ್ಯಾಪಕ ಶ್ಲಾಘನೆ

ವಾಮದಪದವು: ಖಾಸಗಿ ವ್ಯಕ್ತಿಗಳು ಆಕ್ರಮವಾಗಿ ಮುಚ್ಚಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ತೆರವುಗೊಳಿಸಿ ದಲಿತ ಮನೆಗಳ ಸಹಿತ ಇತರ ಕುಟುಂಬಗಳಿಗೆ ದಲಿತ ಸಂಘಟನೆಗಳ ಪ್ರಮುಖರು ನ್ಯಾಯ ಒದಗಿಸಿದ ಘಟನೆ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ನಡೆದಿದೆ. ದಲಿತ ಮುಖಂಡರ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಘಟನೆ ವಿವರ

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ರಸ್ತೆ ಮುಚ್ಚಲ್ಪಟ್ಟು ತೊಂದರೆಗೊಳಲಾದ ಕುಟುಂಬಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಕುಡಂಬೆಟ್ಟು ಗ್ರಾಮದ
ಹಲೆಪ್ಪಾಡಿ ಎಂಬಲ್ಲಿ ಇಲ್ಲಿನ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ
ಬಾಬು ಮೇಸ್ತ್ರಿ ಎಂಬವರು
ಕಾಂತಪ್ಪ ಮತ್ತು ಮಕ್ಕಳಾದ ಪ್ರದೀಪ್, ನವೀನ್, ಗುರುಮೂರ್ತಿ ಸಹಿತ ಇತರರು ಸೇರಿ ಈ ರಸ್ತೆಗೆ ತಡೆಬೇಲಿ ಹಾಕಿದ್ದರು. ಇದರಿಂದ ಇಲ್ಲಿನ ದಲಿತ ಕುಟುಂಬಗಳ ಸಹಿತ ಇತರ ಮನೆಗಳವರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.
ಅದರಂತೆ ದಲಿತ ಸಂಘಟನೆಗಳ ಪ್ರಮುಖರಾದ ಜನಾರ್ಧನ ಚೆಂಡ್ತಿಮಾರು, ಶೇಖರ್ ಕುಕ್ಕೇಡಿ, ಉಮೇಶ್ ಕೃಷ್ಣಾಪುರ, ಲೋಕೇಶ್ ಕುಂಟಾಲಪಲ್ಕೆ ಮತ್ತಿತರರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಖಾಸಗಿ ವ್ಯಕ್ತಿ look ಗಳು ಹಾಕಿದ್ದ ತಡೆಬೇಲಿಯನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಇದರಿಂದಾಗಿ ಸ್ಥಳೀಯ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

ಆರೋಪ ಸತ್ಯಕ್ಕೆ ದೂರ:

ಆದರೆ ದಲಿತ ಮುಖಂಡರು ಮೇಲ್ವರ್ಗದವರ ಪರ ನಿಂತು ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ದಲಿತರೇ ಬಿಟ್ಟು ಕೊಟ್ಟ ರಸ್ತೆಯನ್ನು ಇದೀಗ ದಲಿತ ಕುಟುಂಬಗಳಿಗೆ ಬಿಟ್ಟುಕೊಡುವ ಮೂಲಕ ದಲಿತ ಸಂಘಟನೆಗಳ ನಾಯಕರು ಮಾನವೀಯತೆ ಮೆರೆದಿದ್ದಾರೆ ಎಂದು ಸ್ಥಳೀಯ ದಲಿತ ಕುಟುಂಬಗಳ ಸದಸ್ಯರು ಸ್ಪಷ್ಟಪಡಿಸಿದ್ದಾರೆ.