ಜೂನ್ 1ರಂದು ಆಲದಪದವು ನೂತನ ಮದ್ರಸ ಕಟ್ಟಡದ ಉದ್ಘಾಟನೆ ಮತ್ತು ಏಕದಿನ ಮತ ಪ್ರಭಾಷಣ ( ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ : ತಾಲೂಕಿನ ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದ್ರಸ ಹಾಗೂ ಅಲ್-ಮಸ್ಜಿದುಲ್ ಬದ್ರಿಯಾ ಇದರ ನೂತನ ಮದ್ರಸ ಕಟ್ಟಡದ ಉದ್ಘಾಟನೆ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮವು ಜೂನ್ 1 ರಂದು ಶನಿವಾರ ಮಗ್ರಿಬ್ ನಮಾಝ್ ಬಳಿಕ ಇಲ್ಲಿನ ಮದ್ರಸ ವಠಾರದ ಮರ್‍ಹೂಂ ಯಾಕೂಬ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಲಿದೆ.


ಕೆಎಫ್ ಸಿ ಕೃಷ್ಣಾಪುರ ಕೊಡುಗೆಯ ನೂತನ ಮದ್ರಸ ಕಟ್ಟಡವನ್ನು ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಖಾಝಿ ಹಾಜಿ ಇ ಕೆ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸುವರು. ಸಯ್ಯಿದ್ ಕೆ ಪಿ ಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ದುವಾ ನೇತೃತ್ವ ವಹಿಸುವರು. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಮಸೀದಿ ಹಾಗೂ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸುವರು.

ಕಾವಳಕಟ್ಟೆ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಅಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ಶುಭ ಸಂದೇಶ ನೀಡುವರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣಗೈಯುವರು. ಕೆಸಿಎಫ್ ಕೃಷ್ಣಾಪುರ ಅಧ್ಯಕ್ಷ ಅಬ್ದುಲ್ ಖಾದರ್ (ಸಾದಿಕ್) ಅವರು ಮದ್ರಸ ಕಟ್ಟಡ ಕೀ ಹಸ್ತಾಂತರಿಸುವರು. ಕಾರ್ಯಕ್ರಮದಲ್ಲಿ ಹಲವು ಮಂದಿ ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸುವರು ಎಂದು ಮದ್ರಸ ಪ್ರಕಟಣೆ ತಿಳಿಸಿದೆ.