ಹೊಸಪಟ್ಣ ಸ.ಕಿ.ಪ್ರಾ.ಶಾಲೆಯಲ್ಲಿ ಅರ್ಥಪೂರ್ಣ ಪರಿಸರ ದಿನಾಚರಣೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬೆಳ್ತಂಗಡಿ: ಪ್ಲಾಸ್ಟಿಕ್ ಗಳನ್ನು ಸುಟ್ಟರೆ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಪರಿಸರಕ್ಕಾಗಿ ನಾವು ಬಳಗದ ಪ್ರೇಮಾನಂದ ಕಲ್ಮಾಡಿ ಹೇಳಿದರು.
ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗಬನಗಳನ್ನು ಮೂಲ ನೈಸರ್ಗಿಕ ರೂಪದಲ್ಲಿ ಉಳಿಸಿಕೊಳ್ಳುವಿಕೆ, ಅಂತರ್ಜಲದ ಮಟ್ಟ ಕಾಪಾಡಿಕೊಳ್ಳುವಿಕೆ ಇತ್ಯಾದಿ ವಿಷಯಗಳ ಬಗ್ಗೆ ಪ್ರೇಮಾನಂದ ಕಲ್ಮಾಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಮುಂದಿನ ವರ್ಷದ ಪರಿಸರ ದಿನದ ಮೊದಲಾಗಿ ಹೊಸಪಟ್ಣ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಳ್ಳುವಂತೆ ಸಲಹೆ ನೀಡಿದರು.


ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಮತ್ತು ಸದಸ್ಯ ಸತೀಶ್ ಶಾಲಾ ಪರಿಸರದಲ್ಲಿ ತೆಂಗಿನ ಸಸಿಯನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಅಂಗಳದಲ್ಲಿ ವಿಶಾಲವಾಗಿ ಹಬ್ಬಿ ನಿಂತಿರುವ ಮರಗಳನ್ನು ನೆಟ್ಟು ಬೆಳೆಸಿದ ದಿವಂಗತ ಸುಂದರ ಪೂಜಾರಿಯವರ ಬಗ್ಗೆ ಭಾಸ್ಕರ ಪೂಜಾರಿ ತಿಳಿಹೇಳಿದರು.
ಬಜಿರೆ ಕ್ಲಸ್ಟರ್ ನ ಸಿ.ಆರ್.ಪಿ.ರಾಜೇಶ್ ಮಕ್ಕಳಲ್ಲಿ ಸ್ವಚ್ಛತೆಯ ಪ್ರಜ್ಞೆಯನ್ನು ಬೆಳೆಸುವ ಬಗ್ಗೆ ಪೋಷಕರಿಗೆ ಕಿವಿಮಾತು ಹೇಳಿದರು.
ಶಾಲಾ ವಿದ್ಯಾರ್ಥಿಗಳು ಪರಿಸರಗೀತೆಯನ್ನು ಹಾಡಿದರು.’ಹಸಿರೇ ಉಸಿರು’, ‘ನೀರನ್ನು ಮಿತವಾಗಿ ಬಳಸಿ’,
‘ಇರುವುದೊಂದೇ ಭೂಮಿ’ ಇತ್ಯಾದಿ ಪರಿಸರಪರ ಘೋಷಣೆಗಳನ್ನು ಕೂಗಿದರು.
ವೇಣೂರು ಗ್ರಾಮ ಪಂಚಾಯತ್ ಸದಸ್ಯ ಸುನಿಲ್ ಶಾಲೆಯಲ್ಲಿ ಇಂತಹ
ಸಮುದಾಯ ಜಾಗೃತಿಯ ಕಾರ್ಯಕ್ರಮಗಳು ಬಹಳ ಉಪಯುಕ್ತ ಎಂದು ಹೇಳಿದರು.
ಹೊಸಪಟ್ಣ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಕಾರ್ಕಳ ಸ್ವಾಗತಿಸಿ ವಂದಿಸಿದರು. ಗೌರವ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ, ಕಾರ್ಯದರ್ಶಿ ಭಾಸ್ಕರ ಪೂಜಾರಿ
ನಾಯರ್ ಮೇರು, ಸಂಚಾಲಕ ಗಣೇಶ್ ಪೂಜಾರಿ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್ ಮೇರು, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಪೂಜಾರಿ ನಾಯರ್ ಮೇರು, ಕಾರ್ಯದರ್ಶಿ ರಂಜಿತ್ ಜಾರಿಗೆದಡಿ, ಗೌರವಾಧ್ಯಕ್ಷ ದೇಜಪ್ಪ ಮೂಲ್ಯ ಶಾಂತಿರೊಟ್ಟು , ಹೊಸಪಟ್ಣ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಪರಾರಿ, ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ ಮತ್ತು ಉಪಾಧ್ಯಕ್ಷೆ ಶಾರದಾ ಸಂಪನ್ಮೂಲ ವ್ಯಕ್ತಿ ಪ್ರೇಮಾನಂದ ಕಲ್ಮಾಡಿಯವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.


ಪರಿಸರಕ್ಕಾಗಿ ನಾವು ಎನ್ನುವ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಸಂಘಟನೆ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ (ರಿ) ಹೊಸಪಟ್ಣ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಹೊಸಪಟ್ಣ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹೊಸಪಟ್ಣ, ಶ್ರೀ ಧರ್ಮಸ್ಥಳ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಹೊಸಪಟ್ಣ, ಹಾಲು ಉತ್ಪಾದಕರ ಸಹಕಾರ ಸಂಘ ಹೊಸಪಟ್ಣ, ಗ್ರಾಮ ಪಂಚಾಯತಿ ವೇಣೂರು, ಶಾಲಾಭಿವೃದ್ಧಿ ಸಮಿತಿ ಹೊಸಪಟ್ಣ ಇವೆಲ್ಲವುಗಳ ಸಹಭಾಗಿತ್ವದಲ್ಲಿ ಹೊಸಪಟ್ಣ ಸರಕಾರಿ ಶಾಲೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.