ಬುರೂಜ್ ಶಾಲೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇ. 100 ಫಲಿತಾಂಶ, ಇಸ್ರತ್ ಪ್ರಥಮ (ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಮೂಡುಪಡುಕೋಡಿ ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ 2023-24ನೇ ಸಾಲಿನ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದು ಎ ಶ್ರೇಣಿಯನ್ನು ಗಳಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕುಮಾರಿ ಇಸ್ರತ್ ಬಾನು 606 (96.64% ) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.


ಅನನ್ಯ ಅಡಪ 590 (94.4), ವಿಶ್ರಾಂತ್ ವಿ. ಸಾಲ್ಯಾನ್ 568 (90.8 ), ತನ್ವಿ 558 (89.28), ಮಹಮ್ಮದ್ ರಿಹಾನ್ 554 (88.64), ಶಾಹಿನ ಪರ್ವೀನ್ 553 (88.48), ವಿದ್ಯಾಶ್ರೀ 550 (88%) ಸುಭಿಕ್ಷಾ ಮತ್ತು ವಿತೇಶ್ 544( 87.04 ), ಮೊಹಮ್ಮದ್ ಫವಾಝ್ 541 (86.56) ,ಧ್ಯಾನ್ S. ಶೆಟ್ಟಿ 536( 85.76%) ಪಡೆದುಕೊಂಡು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲ, ಮುಖ್ಯ ಶಿಕ್ಷಕಿ ಜಯಶ್ರೀ ‌ಬಿ. ಮತ್ತು ಶಿಕ್ಷಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.