ಆಲದಪದವು ನೂರುಲ್ ಇಸ್ಲಾಂ ಮದ್ರಸ ಹಾಗೂ ಅಲ್-ಮಸ್ಜಿದುಲ್ ಬದ್ರಿಯಾದ ನೂತನ ಮದ್ರಸ ಕಟ್ಟಡ ಲೋಕಾರ್ಪಣೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ : ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದ್ರಸ ಹಾಗೂ ಅಲ್-ಮಸ್ಜಿದುಲ್ ಬದ್ರಿಯಾ ಇದರ ನೂತನ ಮದ್ರಸ ಕಟ್ಟಡ ಶನಿವಾರ ಲೋಕಾರ್ಪಣೆಗೊಂಡಿತು.


ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲ್ ಅವರು ಮದ್ರಸಗಳು ಅರಿವಿನ ಕೇಂದ್ರವಾಗಿದ್ದು, ಮಾನವೀಯತೆ ಪಾಠ ಕಲಿಸಿ, ಸಮಾಜದಲ್ಲಿ ಜೀವಿಸುವ ರೀತಿಯ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಕಲಿಸುವ ಕೇಂದ್ರಗಳಾಗಿರುವ ಮದ್ರಸ ನಿರ್ಮಾಣಕ್ಕೆ ಸಹಾಯ-ಸಹಕಾರ ನೀಡುವುದು ಅತ್ಯಂತ ಪುಣ್ಯದಾಯಕ ಎಂದು ಹೇಳಿದರು.


ಜ್ಞಾನವಿಲ್ಲದೆ ಮನುಷ್ಯ ಕೈಗೊಳ್ಳುವ ಯಾವುದೇ ಆರಾಧನಾ ಕರ್ಮಗಳೂ ಸ್ವೀಕಾರಾರ್ಹವಲ್ಲ. ಇಂತಹ ಅರಿವನ್ನು ನೀಡುವ ಮದ್ರಸಗಳು ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯ ಜೀವನವನ್ನು ಪ್ರಕಾಶದೆಡೆಗೆ ಕೊಂಡೊಯ್ಯುವ ವಿದ್ಯಾಕೇಂದ್ರವಾಗಿರುವ ಮದ್ರಸಕ್ಕೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿರುವ ಕೆ ಎಫ್ ಸಿ ಕೃಷ್ಣಾಪುರ ತಂಡದ ಯುವಕರ ಕಾರ್ಯ ಶ್ಲಾಘನೀಯ ಎಂದರು.


ದುಆ ನೇತೃತ್ವ ವಹಿಸಿದ್ದ ಸಯ್ಯಿದ್ ಕೆ ಪಿ ಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ಮಾತನಾಡಿ, ಸೃಷ್ಟಿಕರ್ತನನ್ನು ಹಾಗೂ ಆಧ್ಯಾತ್ಮಿಕತೆಯನ್ನು ಪುಟ್ಟ ಮಕ್ಕಳಿಗೆ ಕಲಿಸಿಕೊಡುವ ಬಾಲ ವಿದ್ಯಾಕೇಂದ್ರವಾಗಿರುವ ಮದ್ರಸಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಖಾಝಿ ಹಾಜಿ ಇ ಕೆ ಇಬ್ರಾಹಿಂ ಮುಸ್ಲಿಯಾರ್ ನೂತನ ಮದ್ರಸ ಕಟ್ಟಡ ಲೋಕಾರ್ಪಣೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮಸೀದಿ ಹಾಗೂ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಹಂಝ ಬಸ್ತಿಕೋಡಿ ಮಾತನಾಡಿ, ಸ್ಥಳೀಯ ಮದ್ರಸ ನಡೆದುಕೊಂಡು ಬಂದ ಹಾದಿ ಹಾಗೂ ಅದಕ್ಕೆ ಸಹಕರಿಸಿದ ಸರ್ವ ರಿಗೆ ಕೃತಜ್ಞತೆ ಸಲ್ಲಿಸಿದರು.
ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣಗೈದರು. ಮದ್ರಸ ಕಟ್ಟಡ ಕೀ ಹಸ್ತಾಂತರಿಸಿ ಮಾತನಾಡಿದ ಕೆಸಿಎಫ್ ಕೃಷ್ಣಾಪುರ ಅಧ್ಯಕ್ಷ ಅಬ್ದುಲ್ ಖಾದರ್ (ಸಾದಿಕ್) ಅವರು, ಯಾವುದೇ ಹೊರಗಿನ ಸಂಗ್ರಹ ಇಲ್ಲದೆ ಕೇವಲ ಕೆ ಸಿ ಎಫ್ ತಂಡದ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತದಿಂದ ಈ ಮದ್ರಸ ಕಟ್ಟಡವನ್ನು ನಿರ್ಮಿಸಲು ಸಹಕರಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಈ ಮದ್ರಸ ಕಟ್ಟಡವನ್ನು ಬಳಸಿಕೊಂಡು ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಿದಲ್ಲಿ ಅದುವೇ ನಮ್ಮ ಸಂಸ್ಥೆಗೆ ನೀಡುವ ದೊಡ್ಡ ಸನ್ಮಾನ ಎಂದರು.
ಮುಖ್ಯ ಅತಿಥಿಗಳಾಗಿ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ನೂರುಲ್ ಇಸ್ಲಾಂ ಮದ್ರಸ ಇಮಾಂ ಎಂ ಎಸ್ ಅಬೂಬಕ್ಕರ್ ಸಿದ್ದೀಕ್ ಅಮ್ದಾನಿ, ಮಾವಿನಕಟ್ಟೆ ಮಸೀದಿ ಖತೀಬ್ ಅಬ್ದುಲ್ ನಾಸಿರ್ ಅಹ್ಸನಿ, ಬೆಳ್ತಂಗಡಿ ಮುಸ್ಲಿಂ ಜಮಾತ್ ಕಾರ್ಯದರ್ಶಿ ರಝಾಕ್ ಸಖಾಫಿ ಮಡಂತ್ಯಾರು, ಮಲಾರ್-ಅರಸ್ತಾನ ಖತೀಬ್ ಮುಹಮ್ಮದ್ ಶಫೀಕ್ ಅಲ್-ಫಾಳಿಲಿ ಕೌಸರಿ ಕುಕ್ಕಾಜೆ, ಇರ್ವತ್ತೂರುಪದವು ಮಸೀದಿ ಖತೀಬ್ ಉಮರ್ ಮದನಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೃಷ್ಣಾಪುರ ಬದ್ರಿಯಾ ಮಸೀದಿ ಅಧ್ಯಕ್ಷ ಹಾಜಿ ಬಿ ಎಂ ಮಮ್ತಾಝ್ ಅಲಿ, ಕೃಷ್ಣಾಪುರ ಅಲ್-ಬದ್ರಿಯಾ ಎಜ್ಯುಕೇಶನಲ್ ಎಸೋಸಿಯೇಶ್ ಅಧ್ಯಕ್ಷ ಅಬೂಬಕ್ಕರ್ ಕೃಷ್ಣಾಪುರ, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್, ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಉದ್ಯಮಿ ಮೊಹಮ್ಮದ್ ಕಳವಾರು, ಮಾವಿನಕಟ್ಟೆ ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಎಲ್ಪೇಲ್, ಕೃಷ್ಣಾಪುರ ಕೆ ಎಫ್ ಸಿ ಉಪಾಧ್ಯಕ್ಷ ಮುಹಮ್ಮದ್ ಅಶ್ರಫ್, ಸಹ್ಯಾದ್ರಿ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಮುಸ್ತಫಾ ಬಸ್ತಿಕೋಡಿ, ಹಿದಾಯ ಫೌಂಡೇಶನ್ ಯೂತ್ ವಿಂಗ್ ಉಪಾಧ್ಯಕ್ಷ ಆಶಿಕ್ ಕುಕ್ಕಾಜೆ, ಬುರೂಜ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಶೇಖ್ ರಹ್ಮತುಲ್ಲಾ, ಪತ್ರಕರ್ತ ಆರಿಫ್ ಪಡುಬಿದ್ರಿ, ಉದ್ಯಮಿಗಳಾದ ಅಬೂಬಕ್ಕರ್ ಕನ್ನಡನಾಡು, ಪಿ ಅಬ್ದುಲ್ ಕುಂಞ ಮಾವಿನಕಟ್ಟೆ, ಹಾಜಿ ತುಫೈಲ್ ಅಹ್ಮದ್, ಹಾಜಿ ಮುಹಮ್ಮದ್ ಸಾಗರ್ ಬಿ ಸಿ ರೋಡು, ರಫೀಕ್ ವಾಮದಪದವು ಕತಾರ್, ಬಿ ಎಚ್ ರಫೀಕ್ ಮಾವಿನಕಟ್ಟೆ, ರಹೀಂ ಮಲ್ಲೂರು, ಆಲದಪದವು ಮದ್ರಸ ಗೌರವಾಧ್ಯಕ್ಷ ಎ ಪುತ್ತುಮೋನು ನಡಾಯಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮದ್ರಸ ಕಟ್ಟಡದ ನಿರ್ಮಾಣಕ್ಕೆ ಸಹಕರಿಸಿದ ಕೆ ಎಫ್ ಸಿ ಕೃಷ್ಣಾಪುರ ಇದರ ಅಧ್ಯಕ್ಷ ಅಬ್ದುಲ್ ಖಾದರ್ (ಸಾದಿಕ್) ಅವರನ್ನು ಮದ್ರಸ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮದ್ರಸ ಅಧ್ಯಕ್ಷ ಹಂಝ ಬಸ್ತಿಕೋಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.