ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕು ಘಟಕದ “ಪತ್ತನಾಜೆ” ಕಾರ್ಯಕ್ರಮದ ಮನವಿ ಪತ್ರ ಬಿಡುಗಡೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕ ಆಯೋಜಿಸಿರುವ “ಪತ್ತನಾಜೆ” ಕಾರ್ಯಕ್ರಮದ ಮನವಿ ಪತ್ರ ಬಿಡುಗಡೆ ಬ್ರಹ್ಮರಕೂಟ್ಲು ಭಜನಾಮಂದಿರದಲ್ಲಿ ನಡೆಯಿತು.

ಗೌರವ ಸಲಹೆಗಾರ ಅನಿಲ್ ಪಂಡಿತ್ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಾಣೂರು( ಸಾಯಿಪ್ರಿಯ) ಮಾತನಾಡಿ ಮೇ.19ರಂದು ಬಿ.ಸಿ.ರೋಡಿನ ಲಯನ್ಸ್ ಮಂದಿರದಲ್ಲಿ ಪತ್ತನಾಜೆ ಎಂಬ ವಿಶೇಷ ಜಾನಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆಹಾರ ಮೇಳ, ಕಲಾಮೇಳ, ವಸ್ತುಪ್ರದರ್ಶನ, ಸಾಧಕರಿಗೆ ಸನ್ಮಾನ, ಕ್ರೀಡಾಕೂಟ, ಪತ್ತನಾಜೆಯ ಬಗ್ಗೆ ಮಾಹಿತಿ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸುವಂತೆ ವಿನಂತಿಸಿದರು.

ಗೌರವ ಸಲಹೆಗಾರರಾದ ಸದಾಶಿವ ಡಿ. ತುಂಬೆ, ಗೋಪಾಲ ಅಂಚನ್, ಉಪಾಧ್ಯಕ್ಷೆ ಪ್ರತಿಭಾ ಪಿ.ಶೆಟ್ಟಿ, ಸಂಚಾಲಕರಾದ ಮನೋಜ್ ಕನಪಾಡಿ, ಪ್ರಶಾಂತ್ ಕನಪಾಡಿ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಕಡೆಗೋಳಿ, ಪ್ರಮುಖರಾದ ಅಕ್ಬರ್ ಅಲಿ, ಜಲಜಾಕ್ಷಿ, ಯೋಗೀಶ್ ದರಿಬಾಗಿಲು, ಸತೀಶ್ ಕಕ್ಯಪದವು, ಶ್ರೀಕಾಂತ್, ಬೇಬಿ ತನ್ವಿ ಉಪಸ್ಥಿತರಿದ್ದರು.