ಕಾರಂಬಡೆ ಕ್ಷೇತ್ರದಲ್ಲಿ ಮಹಾಪೂಜೆ

ಬಂಟ್ವಾಳ: ಕಾರಂಬಡೆ ಶ್ರೀ ಮಹಾಮ್ಮಾಯಿ ಕ್ಷೇತ್ರದಲ್ಲಿ ವರ್ಷಾವಧಿ ನಡೆಯುವ ಮಹಾಪೂಜೆ( ಮಾರಿಪೂಜೆ)ಯು ಭಕ್ತಿಶ್ರದ್ಧಾಪೂರ್ವಕವಾಗಿ ಸಂಪನ್ನಗೊಂಡಿತು.
ಪುರೋಹಿತರಾದ ಕೇಶವ ಶಾಂತಿ ನೇತೃತ್ವದಲ್ಲಿ ವೈಧಿಕ ವಿಧಾನಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.


ಬೆಳಿಗ್ಗೆ ಗಣಹೋಮ, ಸಂಜೆ ಭಜನೆ, ಸಾರ್ವಜನಿಕ ಹೂವಿನಪೂಜೆ, ಶ್ರೀ ಮಹಾಮ್ಮಾಯಿ ಅಮ್ಮನವರ ನೂತನ ಬಿಂಬಕ್ಕೆ ರಜತ-ಸ್ವರ್ಣ, ಕಾಣಿಕೆ ಸಮರ್ಪಣೆ, ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಅಪಾರ ಸಂಖ್ಯೆಯಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.


ಮಾಜಿ ಸಚಿವ ಬಿ.ರಮಾನಾಥ ರೈ, ಕ್ಷೇತ್ರದ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಬಂಟ್ವಾಳ ಸಹಕಾರಿ ಬ್ಯಾಂಕು ಕಾರ್ಯನಿರ್ವಾಹಣಾಧಿಕಾರಿ ಬೇಬಿ ಕುಂದರ್, ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೊ, ಭುವನೇಶ್ ಪಚ್ಚಿನಡ್ಕ, ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು, ಸಮಿತಿ ಪ್ರಮುಖರಾದ ನಾಗೇಶ್ ದರ್ಬೆ, ಜಯಶಂಕರ ಕಾನ್ಸಾಲೆ, ಯಶವಂತ ಕಾರಂಬಡೆ, ಹರೀಶ್ ಸಾಲ್ಯಾನ್ ಕುದನೆ, ಭಾರತಿ ಬರ್ದಿಲ, ಕೊರಗಪ್ಪ ಕೊಳಂಬೆಬೈಲು, ಜಯಶ್ರೀ ಮಂಗಳೂರು ಮೊದಲಾದವರಿದ್ದರು.