ಕಲಾವಿದ, ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆಯವರಿಗೆ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್

ಬಂಟ್ವಾಳ: ಆರ್ಯಭಟ ಇಂಟರ್ ನ್ಯಾಶನಲ್ ಟ್ರಸ್ಟ್ ಕೊಡಮಾಡುವ ಆರ್ಯಭಟ ಇಂಟರ್ ನ್ಯಾಶನಲ್ ಎವಾರ್ಡ್ ಗೆ ಹಿರಿಯ ಕಲಾವಿದ ಮತ್ತು ಧಾರ್ಮಿಕ ಸೇವಾ ಆರಾಧಕ ದಿವಾಕರ ದಾಸ್ ಕಾವಳಕಟ್ಟೆ ಆಯ್ಕೆಯಾಗಿದ್ದಾರೆ.


ದಿವಾಕರ ದಾಸ್ ಅವರ ಸಾಂಸ್ಕ್ರತಿಕ ಮತ್ತು ಧಾರ್ಮಿಕ ರಂಗದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಮೇ.25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ದಿವಾಕರದಾಸ್ ಅವರು ಯಕ್ಷಗಾನ ಕಲಾವಿದರಾಗಿ, ಪ್ರಸಾದನ ಮತ್ತು ವೇಷಭೂಷಣ ಕಲಾವಿದರಾಗಿ, ಸಾಂಸ್ಕ್ರತಿಕ ಸಂಘಟಕರಾಗಿ, ಶ್ರುತಿ ಆರ್ಟ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಜತೆಯಲ್ಲಿ ಹರಿಸೇವೆ, ಮಹಮ್ಮಾಯಿ ಪೂಜೆ, ಮಹಮ್ಮಾಯಿ ದರ್ಶನ ಸೇವೆಯ ಆರಾಧಕರಾಗಿ ಸೇವೆ ಸಲ್ಲಿಸುತ್ತಿರುವ ದಿವಾಕರದಾಸ್ ಅವರು ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಸಹಕಾರಿ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ: 9449104318