ವಿಶ್ವ ಮಾನಸಿಕ ಆರೋಗ್ಯ ದಿನ-ಸೇವಕರಿಗೆ ನೂರೊಂದು ನಮನ
ಇಂದು ವಿಶ್ವ ಮಾನಸಿಕ ಆರೋಗ್ಯ ದಿನ….
ಮಾನಸಿಕ ಆರೋಗ್ಯ ಪಡೆದವರ ಬದುಕು ನಿಜಕ್ಕೂ ಧನ್ಯ…
1992ರಲ್ಲಿ ವಿಶ್ವ ಮಾನಸಿಕ ಆರೋಗ್ಯ ಫೆಡರೇಶನ್ ಘೋಷಿಸಿದ ಈ ದಿನ….
ರಿಚಾರ್ಡ್ ಹಂಟರ್ ಸ್ಥಾಪಿಸಿದ ಸುದಿನ…
ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವನ ಹಕ್ಕು..
ಮನುಕುಲಕ್ಕೆ ಎಲ್ಲಡೆಯೂ ಸಿಗಲಿ ಮಾನಸಿಕ ಆರೋಗ್ಯದ ದಿಕ್ಕು…
ಆರೋಗ್ಯವೆಂದರೆ ಮಾನಸಿಕ ಸ್ವಾಸ್ಥ್ಯವೂ ಮುಖ್ಯ…
ಮರೆಯದಿರಿ ಮನುಜರೆ ಮಾನಸಿಕ ಆರೋಗ್ಯದ ಪ್ರಾಮುಖ್ಯ…
ಮಾನಸಿಕ ರೋಗಿಗಳ ಬಗೆಗಿನ ಕಾಳಜಿ ಈ ಒಂದು ದಿನಕ್ಕೆ ಸೀಮಿತವಾಗದಿರಲಿ….
ಮನದ ಸಮಸ್ಯೆಗೆ ಪ್ರತಿ ಮನೆ-ಮನಗಳು ನಿರಂತರ ಸ್ಪಂದಿಸಲಿ….
ಇಲ್ಲಿದೆ ಅಧಿತ್ ಕಿರಣ್ ನ್ಯೂರೋ ಸೈಕ್ಯಾಟ್ರಿ & ಕೌನ್ಸೆಲಿಂಗ್ ಕೇಂದ್ರ…
ಇದು ಸ್ಪೂರ್ತಿ ಚೈತನ್ಯ ಸಾಂತ್ವನದ ಪುನುರುತ್ಥಾನ ಕೇಂದ್ರ…
ಬದುಕಿನಲ್ಲಿ ನೊಂದು ಬೆಂದು ಬಳಲಿದವರಿಗೆ ಇದು ಶಾಂತಿಧಾಮ…
ಮಾನಸಿಕ ನೆಮ್ಮದಿಯ ಬಯಸುವವರಿಗೆ ಇದು ಆರೋಗ್ಯ ಧಾಮ…
ಇಲ್ಲಿನ ತಜ್ಞ ವೈದ್ಯರು, ಆಪ್ತ ಸಮಾಲೋಚಕರು, ಸಿಬ್ಬಂದಿಗಳ ನಿಸ್ವಾರ್ಥ ನಗುಮೊಗದ ಸೇವಾ ನೀತಿ…
ತಮ್ಮ ಒತ್ತಡವ ಮರೆತು ನಮಗೆ ನೀಡುತ್ತಾರೆ ಮಾನವೀಯತೆಯ ಪ್ರೀತಿ..
ಮಿಡಿಯುತ್ತಿದೆ ನಮ್ಮೆಲ್ಲರ ಒಳಿತಿಗಾಗಿ ಇಲ್ಲಿರುವವರೆಲ್ಲರ ಅಂತಕರಣ…
ನಮ್ಮ ಹೃದಯ ತಟ್ಟುವ, ಮನವ ಮುಟ್ಟುವ ನಮ್ಮೆಲ್ಲರ ಆಶಾಕಿರಣದ ಸರ್ವರಿಗೂ ವಿಶ್ವ ಮಾನಸಿಕ ಆರೋಗ್ಯ ದಿನದ ನೂರೊಂದು ನಮನ…..
( ಮೆಂಟಲ್ ಹೆಲ್ತ್ ಡೆ ದಿನ ಬರೆದ ಕವನ)
✍????ಗೋಪಾಲ ಅಂಚನ್
ಹಿರಿಯ ಪತ್ರಕರ್ತ