ಕೊಯಿಲ ಶಾಲೆಯಲ್ಲಿ ಪೋಷಕರ ಸಭೆ

ಬಂಟ್ವಾಳ: ಕೊಯಿಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಬುಧವಾರ ನಡೆಯಿತು.
ಯಕ್ಷಲೋಕ ಜೀವನ ಕೌಶಲ್ಯ ತರಬೇತಿ ಕೇಂದ್ರದ ನಿರ್ದೇಶಕ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ” ಶಾಲೆ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ವಿಷಯದಲ್ಲಿ ತರಬೇತಿ‌ ನೀಡಿದರು.
ಶಾಲೆಗಳು ಮತ್ತು ಮಕ್ಕಳಿಗಾಗಿ ಪೋಷಕರು ಮೀಸಲಿಡುವ ಸಮಯವೇ ತಮ್ಮ ಮಕ್ಕಳು ಮತ್ತು ಶಾಲೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ಯಾಕೆಂದರೆ ಶಾಲೆಯ ಬೆಳವಣಿಗೆಯಲ್ಲಿ ಮತ್ತು ತಮ್ಮ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದುದು ಎಂದು ಅವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಮೇಬಲ್ ಪೆರ್ನಾಂಡೀಸ್, ಶಿಕ್ಷಕ ಸಂತೋಷ್ ಉಪಸ್ಥಿತರಿದ್ದರು.