ನಮ ಬಿರುವೆರ್ ಐಕ್ಯತಾ ಸಮಾವೇಷಕ್ಕೆ ವ್ಯಾಪಕ ಸಿದ್ಧತೆ

*ಬಂಟ್ವಾಳ*: ಬಿಲ್ಲವ ಸಮುದಾಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅಪೂರ್ವ ಸಮಾರಂಭವೊಂದಕ್ಕೆ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿ.ಸಿ.ರೋಡು ಸಜ್ಜಾಗುತ್ತಿದೆ.ಡಿಸೆಂಬರ್ 8 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿರುವ ನಮ ಬಿರುವೆರ್ ಐಕ್ಯತಾ ಸಮಾವೇಷಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದೆ.ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ, ಬಂಟ್ವಾಳ ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ತಾಲೂಕು ಮತ್ತು ಮಾಣಿ ಘಟಕಗಳ ಸಹಭಾಗಿತ್ವದಲ್ಲಿ ಸಂಪನ್ನಗೊಳ್ಳಲಿರುವ ಈ ಐಕ್ಯತಾ ಸಮಾವೇಷ ಬಿಲ್ಲವರ ಇತಿಹಾಸದಲ್ಲೊಂದು ಹೊಸ ದಾಖಲೆಯಾಗಿ ಮೂಡಿಬರಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆಈಗಾಗಲೇ ಸಮಿತಿಯ ಪ್ರಮುಖರನ್ನೊಳಗೊಂಡ ನಾಲ್ಕೈದು ತಂಡಗಳು ತಾಲೂಕಿನಾದ್ಯಾಂತ ಇರುವ ಬಿಲ್ಲವ ಸಂಘಟನೆಗಳು, ಬಿಲ್ಲವ ಪ್ರಮುಖರನ್ನು ಭೇಟಿ ಮಾಡಿ ಸಮಾಲೋಚನಾ ಸಭೆ ನಡೆಸುತ್ತಿದ್ದು ತಾಲೂಕಿನ ಪ್ರತೀ ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತೀ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬಿಲ್ಲವ ಭಾಂದವರು ಸಮಾವೇಷದಲ್ಲಿ ಭಾಗವಹಿಸುವ ಲಕ್ಷಣಗಳು ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಷಗೊಳ್ಳುವ ನಿರೀಕ್ಷೆ ಇದೆ.ಸ್ಪರ್ಶಾ ಕಲಾಮಂದಿರದ ವಿಶಾಲ ಸಭಾಂಗಣ, ಭವ್ಯವಾದ ವೇದಿಕೆ ಸಹಿತ ಇತರ ವ್ಯವಸ್ಥೆಗಳ ಸಿದ್ಧತೆ ಭರದಿಂದ ಸಾಗುತ್ತಿದೆ. ಬಿ.ಸಿ.ರೋಡು ನಗರ ಸಹಿತ ಇತರ ನಗರ ಭಾಗಗಳು ಸೇರಿದಂತೆ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಐಕ್ಯತಾ ಸಮಾವೇಷದ ಹಿನ್ನೆಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು ಪ್ರತೀ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ಆರಂಭಗೊಂಡಿದೆ.ಪ್ರಸ್ತುತ ನಾನಾ ಕಾರಣಗಳಿಂದಾಗಿ ಅಲ್ಲಲ್ಲಿ ವಿಭಜನೆಗೊಳ್ಳುತ್ತಿರುವ ಬಿಲ್ಲವರು ಒಂದೇ  ವೇದಿಕೆಯಡಿ ಸಂಪನ್ನಗೊಂಡು ಬಿಲ್ಲವ ಸಮಾಜದ ಗತವೈಭವ ಮತ್ತೊಮ್ಮೆ ಜಗತ್ತಿಗೆ ಸಾರಲು ಈ ಐಕ್ಯತಾ ಸಮಾವೇಷ ಮುನ್ನುಡಿಯಾಗಲಿದೆ ಎಂಬ ಅಂಶ ಬಿಲ್ಲವ ಚಿಂತಕರ ಚಾವಡಿಯಲ್ಲಿ ಚರ್ಚೆಯಾಗುತ್ತಿದೆ.ಸಮಾರಂಭದಲ್ಲಿ ನಾಲ್ವರು ಸ್ವಾಮೀಜಿಗಳು ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿಯೊಂದಿಗೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ ಜಯ ಸಿ.ಸುವರ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಅವರಿಗೆ ಅಭಿನಂದನೆ ನಡೆಯಲಿದೆ.ಎ.ರುಕ್ಮಯ ಪೂಜಾರಿ, ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಕೆ.ಮಾಯಿಲಪ್ಪ ಸಾಲ್ಯಾನ್ ಗೌರವಾಧ್ಯಕ್ಷರಾಗಿರುವ, ಯಶವಂತ ಪೂಜಾರಿ ದೇರಾಜೆಗುತ್ತು ಅಧ್ಯಕ್ಷ, ಜಗದೀಶ ಕೊಯಿಲ ಪ್ರಧಾನ ಕಾರ್ಯದರ್ಶಿ, ಪ್ರೇಮನಾಥ್ ಕೆ.ಕೋಶಾಧಿಕಾರಿಯಾಗಿರುವ ಬಿಲ್ಲವ ಕಣ್ಮನಿಗಳ ಅಭಿನಂದನಾ ಸಮಿತಿಯ ಪದಾಧಿಕಾರಿಗಳು,  ಯುವವಾಹಿನಿಯ ಪ್ರಮುಖರ ಸಹಿತ ಅಪಾರ ಸಂಖ್ಯೆಯಲ್ಲಿ ಬಿಲ್ಲವ ಬಾಂಧವರು ಸಮಾವೇಷದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. *ಗೋಪಾಲ  ಅಂಚನ್*    9449104318