ಬಂಟ್ವಾಳ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೇಸ್ಸಿಗರಿಗಿಲ್ಲ-ಪ್ರಭಾಕರ ಪ್ರಭು

ಬಂಟ್ವಾಳ:
ಕೋವಿಡ್ ಎರಡನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರಕಾರವು ಕೊಡಮಾಡಿದ ಕಿಟ್ ಗಳನ್ನು ಕಾರ್ಮಿಕರ ಮನೆ ಬಾಗಿಲಿಗೆ ತಲುಪಿಸಿ ರಾಜ ಧರ್ಮ ಪಾಲನೆಯ ಮೆರೆದ ಸಜ್ಜನ ರಾಜಕಾರಣಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಯವರ ಬಗ್ಗೆ ಮಾತಾನಾಡುವ ನೈತಿಕತೆ ಕಾಂಗ್ರೆಸಿಗರಿಗಿಲ್ಲ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಹೇಳಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ ಇತ್ತೀಚೆಗೆ ಆಗುತ್ತಿರುವ ಅಭಿವೃದ್ಧಿ ಕೆಲಸಗಳು ಸೇರಿದಂತೆ, ಕೊರೋನ ಸಮಯದಲ್ಲಿ ಶಾಸಕರು ವೈಯಕ್ತಿಕ ಹಾಗೂ ಸರಕಾರದಿಂದ ನೀಡಿದ ಹಲವು ಯೋಜನೆಗಳು, ಮುಂಜಾಗ್ರತೆ ಕ್ರಮವಾಗಿ ಕೋವಿಡ್ ನಿಯಂತ್ರಣಕ್ಕಾಗಿ ಎರಡು ಕಡೆ ಸ್ಥಾಪಿಸಿದ ಆಕ್ಸಿಜನ್ ಉತ್ಪಾದನಾ ಘಟಕಗಳು, ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚುವರಿ ಐ.ಸಿ.ಯು ಬೆಡ್ ಗಳು, ತನ್ನ ಸ್ವಂತ ಜಮೀನಿನಲ್ಲಿಯೇ ಕೋವಿಡ್ ಗೆ ತುತ್ತಾಗಿ ಮೃತರಾದವರ ಶವ ಸಂಸ್ಕಾರ ಕ್ಕೆ ವ್ಯವಸ್ಥೆ ಕಲ್ಪಿಸಿ ರಾಜ್ಯಕ್ಕೆ ಮಾದರಿಯಾಗಿರುವುದನ್ನು ಕಾಂಗ್ರೆಸ್ಸಿಗರಿಗೆ ಸಹಿಸಲು ಅಸಾಧ್ಯವಾಗುತ್ತಿದೆ. ಅದಕ್ಕಾಗಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗೈಯ್ಯುತ್ತಿದ್ದಾರೆ ಎಂದು ಪ್ರಭು ಆರೋಪಿಸಿದ್ದಾರೆ.


ಕೋವಿಡ್ ಮಹಾಮಾರಿಗೆ ತುತ್ತಾಗಿ ಮರಣ ಹೊಂದಿದವರ ಮಕ್ಕಳಿಗೆ ಸಂಪೂರ್ಣ ವಿದ್ಯಾಭ್ಯಾಸ ಖರ್ಚು ಸೇರಿದಂತೆ ಅವರ ಎಲ್ಲಾ ಖರ್ಚಗಳನ್ನು ಭರಿಸುವ ದೃಷ್ಟಿಯಿಂದ ಟ್ರಸ್ಟ್ ಪ್ರಾರಂಭ, ಸಂಚಾರಿ ಆರೋಗ್ಯ ಬಸ್ ಸೇವೆ, ಶರ ವೇಗದಲ್ಲಿ ಸಾಗುತ್ತಿರುವ ಕೇಂದ್ರ ಹಾಗೂ ರಾಜ್ಯಸರ್ಕಾರ ಗಳ ಅಭಿವೃದ್ಧಿ ಕಾಮಗಾರಿಗಳು, ಬೇಡಿಕೆಗೆ ತಕ್ಕಂತೆ ಸಮಾರೋಪಾದಿ ಯಲ್ಲಿ ಸಾಗುತ್ತಿರುವ ಕೋವಿಡ್ ವ್ಯಾಕ್ಷಿನ್ ಚುಚ್ಚುಮದ್ದು ಗಳು
ಹೀಗೆ ಎಲ್ಲಾ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಬಂಟ್ವಾಳದ ಜನತೆಯ ಸೇವೆಗೈಯ್ಯುತ್ತಿರುವ ಶಾಸಕರ ಬಗ್ಗೆ ಮಾತಾನಾಡುವಾಗ ಆಲೋಚನೆ ಮಾಡಿಕೊಳ್ಳಲಿ ಎಂದಿರುವ ಪ್ರಭು ಎಲ್ಲಾವನ್ನು ಜಿಲ್ಲೆಯ ಹಾಗೂ ಕ್ಷೇತ್ರದ ಪ್ರಜ್ಞಾವಂತ ಮತದಾರರು ಗಮನಿಸುತ್ತಿದ್ದಾರೆ ಎಂದಿದ್ದಾರೆ.