ಕಾರ್ಯಕರ್ತರ ಸಂಘಟನೆಗೆ ವಿಶೇಷ ಆಧ್ಯತೆ-ರಾಜೇಶ್ ನಾಯ್ಕ್

ಬಂಟ್ವಾಳ: ಪಕ್ಷ ಬಲಿಷ್ಟ ವಾಗಿ ನಿರಂತರವಾಗಿ ಗೆಲುವು ಸಾಧಿಸಿದರೆ ಮಾತ್ರ ಕಾರ್ಯ ಕರ್ತರಿಗೆ ಗೆಲುವು. ಹಾಗಾಗಿ ಕಾರ್ಯಕರ್ತರ ಸಂಘಟನೆಗೆ ಬಿಜೆಪಿ ಸರಕಾರದ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಒತ್ತು ನೀಡುತ್ತೇವೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.


ವೀರಕಂಭ ಗ್ರಾಮದ
ಬೂತ್ ಸಂಖ್ಯೆ 205 ರ ಅಧ್ಯಕ್ಷ ಜಯಪ್ರಸಾದ್ ಶೆಟ್ಟಿ, ಬೂತ್ ಸಂಖ್ಯೆ 206 ರ ಅಧ್ಯಕ್ಷ ಧನಂಜಯ ಪಾದೆ, ಬೂತ್ ಸಂಖ್ಯೆ 207 ರ ಅಧ್ಯಕ್ಷ ಸಂದೀಪ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದ ಬಳಿಕ ಮಾತನಾಡಿದರು.
ವಿರೋಧ ಪಕ್ಷಗಳ ತುಷ್ಠೀಕರಣದ ರಾಜಕೀಯದ ಫಲವಾಗಿ, ಬಿಜೆಪಿ ಪಕ್ಷದ ಕಾರ್ಯಕರ್ತರಿದ್ದ ಬೂತ್ ಗಳಲ್ಲಿ ಅಭಿವೃದ್ಧಿ ಕಾಣದೆ ಹಲವು ವರ್ಷಗಳೇ ಸಂದಿವೆ, ಅಂತಹ ಎಲ್ಲಾ ಬೂತ್ ಗಳ ಅಭಿವೃದ್ಧಿಗೆ
ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕಾರ್ಯಕರ್ತರ ಹುಮ್ಮಸ್ಸು, ಸಹಕಾರ ಬೂತ್ ಅಧ್ಯಕ್ಷ ರ ಮನೆ ಬೇಟಿ- ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ವಿಶೇಷ ನಮಗೆ ಶಕ್ತಿ ನೀಡಿದೆ ಎಂದು ರಾಜೇಶ್ ನಾಯ್ಕ್ ಹೇಳಿದರು.


ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ ಪೂಜಾರಿ, ಗ್ರಾ.ಪಂ.ಸದಸ್ಯ ರಾದ ಸಂದೀಪ್, ಜಯಂತಿ, ಉಮಾವತಿ, ಮೀನಾಕ್ಷಿ ,
ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯ ದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ , ಸುಲೋಚನಾ ಜಿಕೆ ಭಟ್, ಪುಷ್ಪರಾಜ ಚೌಟ, ಮಾಧವ ಮಾವೆ, ಸೀಮಾಮಾಧವ, ದಿನೇಶ್ ಅಮ್ಟೂರು, ಸನತ್ ಕುಮಾರ್ ರೈ, ದೇವಿಪ್ರಸಾದ್ ಶೆಟ್ಟಿ, ಚಂದ್ರಶೇಖರ್ ಬಾಳ್ತಿಲ,ಅರವಿಂದ್ ರೈ, ವಿಷ್ಣು ಭಟ್ ಅಡ್ಯಾಯಿ, ಕೊರಗಪ್ಪ ಗೌಡ ಅಡ್ಯಾಯಿ, ಪುರುಷೋತ್ತಮ ಶೆಟ್ಟಿ ಬಾರೆಕಿನಡೆ ಮತ್ತಿತರರು ಉಪಸ್ಥಿತರಿದ್ದರು.