ರಮ್ಯ ನಿತ್ಯಾನಂದ ಶೆಟ್ಟಿಯವರ ಕಂಬಳ ಲೋಕ ಭಾಗ ೨ ಕೃತಿ ಲೋಕಾರ್ಪಣೆ ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬೆಳ್ತಂಗಡಿ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳ ಲೋಕ ಭಾಗ ೨ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ.ವಿ ಹೆಗ್ಗಡೆ ದಂಪತಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ನಿತ್ಯಾನಂದ ಶೆಟ್ಟಿ ಉಪಸ್ಥಿತಿತರಿದ್ದರು.


ಪುಸ್ತಕದಲ್ಲಿ ಕೋಣಗಳ ಮಾಲಕರು, ಓಟಗಾರರು, ಕಂಬಳ ಛಾಯಾಗ್ರಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು,

ಅಲಂಕಾರಿಕ ಪರಿಕರಗಳನ್ನು ತಯಾರಿಸುವವರು ಹಾಗೂ ಕಂಬಳ ಕೂಟಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರ ಯಶೋಗಾಥೆಯನ್ನು ಬರೆಯಲಾಗಿದೆ.