ಇರ್ವತ್ತೂರು: ನಾಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ

ಇರ್ವತ್ತೂರುಪದವು: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 10ರಂದು ನಡೆಯಲಿದೆ.
ಬೆಳಿಗ್ಗೆ 6ಕ್ಕೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ, 10ಕ್ಕೆ ಗಣಹೋಮ, 11ಕ್ಕೆ ಭಜನಾ ಕಾರ್ಯಕ್ರಮ, ಅಪರಾಹ್ನ 12ಕ್ಕೆಮಹಾಪೂಜೆ, ಬಳಿಕ ಅನ್ನಪ್ರಸಾದ ವಿತರಣೆ, ಸಂಜೆ 4 ಗಂಟೆಗೆ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

✍?ಗೋಪಾಲ ಅಂಚನ್
ಯುವಧ್ವನಿ ನ್ಯೂಸ್