1.50 ಕೋಟಿ ರೂ. ವೆಚ್ಚದಲ್ಲಿ ಸಂಗಬೆಟ್ಟು ದೇವಸ್ಥಾನ ಜೀರ್ಣೊದ್ಧಾರಕ್ಕೆ ಶಿಲಾಮುಹೂರ್ತ

ಯುವಧ್ವನಿ ನ್ಯೂಸ್

ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯ ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರೀ ವೀರಭದ್ರ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ಗರ್ಭಗುಡಿ ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾ ಮುಹೂರ್ತ ಕಾರ್ಯಕ್ರಮ ನೆರವೇರಿತು.


ತಂತ್ರಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆಯಿತು. ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿಗಾರ್, ಪತ್ನಿ ಸಾವಿತ್ರಿ ಶಿಲಾ ಮುಹೂರ್ತ ನೆರವೇರಿಸಿದರು.
ಬಳಿಕ ಕ್ಷೇತ್ರ ಜೀಣೋದ್ದಾರ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿಗಾರ್ ಬೋಳಂಗಡಿ ಮಾತನಾಡಿ, ಸುಮಾರು ೧.೫೦ ಕೋ.ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಕ್ಷೇತ್ರದ ಶ್ರೀ ಗಣಪತಿ, ಶ್ರೀ ವೀರಭದ್ರ ದೇವರ ಗರ್ಭಗುಡಿ, ತೀರ್ಥ ಮಂಟಪ ಮೊದಲಾದ ಜೀಣೋದ್ಧಾರ ಕಾರ್ಯವನ್ನು ನೆರವೇರಿಸಲು ನಿರ್ಧರಿಸಲಾಗಿದ್ದು,ಸಮಾಜದ ಬಂಧುಗಳು, ಭಕ್ತರು ಸಹಕರಿಸುವಂತೆ ಕೋರಿದರು.
ನಿಕಟಪೂರ್ವ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಅ ಮಾತನಾಡಿ ಈ ದೇವಸ್ಥಾನದ ಜೀಣೋದ್ಧಾರ ಕಾರ್ಯಕ್ಕೆ ಹಿಂದುಳಿದ ವರ್ಗ ಇಲಾಖೆ ಮತ್ತು ಸರಕಾರದಿಂದ ಸಿಗಬಹುದಾದ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಕ್ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೂಲಕ ಪ್ರಯತ್ನಿಸುವುದಾಗಿ ಭರವಸೆಯಿತ್ತರು.
ದೇವಸ್ಥಾನದ ಪ್ರ.ಅರ್ಚಕ ಪ್ರಭಾಕರ ಐಗಳ್, ಮುಖ್ಯ ಶಿಲ್ಪಿ ಜಗದೀಶ ಕಾರ್ಕಳ, ಪ್ರಗತಿಪರ ಕೃಷಿಕ ಪ್ರಫುಲ್ಲ ರೈ, ಪ್ರಮುಖರಾದ ಚಂದ್ರಹಾಸ ಗುರಿಕಾರ, ಶ್ರೀನಿವಾಸ ಶೆಟ್ಟಿಗಾರ್, ಸೋಮಯ ಗುರಿಕಾರ, ಮಹಾಬಲ ಗುರಿಕಾರ, ಮೊಕ್ತೇಸರರಾದ ಭೋಜ ಮೊಕ್ತೇಸರ, ಧನಂಜಯ ಮೊಕ್ತೇಸರ, ಪಾತ್ರಿಗಳಾದ ಮಾಧವ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್, ರಾಮಚಂದ್ರ ಪದ್ಮಶಾಲಿ,ಮುಕ್ಕಾಲ್ದಿ ಶೇಖರ ಶೆಟ್ಟಿಗಾರ್, ಭೋಜ ಶೆಟ್ಟಿಗಾರ್, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ದಾಮೋದರ ಶೆಟ್ಟಿಗಾರ್, ದೇವೇಂದ್ರ ಶೆಟ್ಟಿಗಾರ್, ದತ್ತರಾಜ್ ಶೆಟ್ಟಿಗಾರ್, ದೇವಪ್ಪ ಶೆಟ್ಟಿಗಾರ್, ಭವಾನಿ ಶಂಕರ ಪಿ.ಆರ್., ಗಣೇಶ್ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು.ಸುಂದರ ಶೆಟ್ಟಿಗಾರ್ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಯರಾಮ ಮಂಗಳೂರು ವಂದಿಸಿದರು.

ಗೋಪಾಲ ಅಂಚನ್, ಆಲದಪದವು