ಬಂಟ್ವಾಳ ನಗರ ಠಾಣೆಯಲ್ಲಿ ” ತುಳು ಭಾಷಾ ಅರಿವು” ಕಾರ್ಯಾಗಾರ

ಬಂಟ್ವಾಳ: ಪ್ರಾಚೀನ ಭಾಷೆಯಾದ ತುಳು ಭಾಷೆ
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಒಂದೊಮ್ಮೆ ತುಳು ಭಾಷೆ ಮರೆಯಾಗುವ ಹಂತಕ್ಕೆ ತಲುಪಿದ್ದರೂ ಇತ್ತೀಚಿನ ವರ್ಷಗಳಲ್ಲಿ ತುಳು ಭಾಷೆಗೆ ವಿಶೇಷ ಮಾನ್ಯತೆ ದೊರೆಯುತ್ತಿದೆ ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.
ಬಿ.ಸಿ.ರೋಡು ನಗರ ಠಾಣೆಯಲ್ಲಿ ಭಾನುವಾರ ತುಳುವೇತರ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ನಡೆದ ” ತುಳು ಭಾಷಾ ಅರಿವು” ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.


ತುಳು ಭಾಷೆಗೆ ಸ್ವಂತ ಲಿಪಿ ಇದೆ. ಲಿಪಿಯ ಜ್ಞಾನವಿಲ್ಲದಿದ್ದರೂ ತುಳು ಭಾಷೆ ಸುಲಭವಾಗಿ ಮಾತಾಡಬಹುದಾಗಿದೆ. ತುಳುವೇತರ ಅಧಿಕಾರಿಗಳು ತುಳು ಭಾಷೆಯನ್ನು ಮಾತಾಡಲು ಕಲಿಯುವ ಮೂಲಕ ಇಲ್ಲಿನ ಜನರೊಂದಿಗೆ ಪರಿಣಾಮಕಾರಿ ಸಂವಹನ ಸಾಧ್ಯವಾಗಿ ಪರಸ್ಪರ ಉತ್ತಮ ಭಾಂದವ್ಯ ಬೆಳೆಯುತ್ತದೆ. ತುಳುನಾಡಿನ ಆಚರಣೆಗಳು, ಆರಾಧನೆಗಳು, ಸಂಸ್ಕ್ರತಿ ಅನನ್ಯವಾದುದು. ಭಾಷೆಯನ್ನು ಅರಿಯುವ ಮೂಲಕ ತುಳು ನೆಲದ ಸಂಸ್ಕ್ರತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಂಚನ್ ಹೇಳಿದರು.
ಉಪನಿರೀಕ್ಷಕ ಅವಿನಾಶ್ ಗೌಡ ಎಚ್. ಸ್ವಾಗತಿಸಿದರು. ಕೃಷ್ಣ ಕುಲಾಲ್ ವಂದಿಸಿದರು.