ಫೆ. 15ರಂದು ಮಾದುಕೋಡಿ ಕೊರಗಜ್ಜನ ಗಗ್ಗರ ಸೇವೆ


ಬಂಟ್ವಾಳ: ಅಮ್ಮುಂಜೆ ಗ್ರಾಮದ ಮಾದುಕೋಡಿ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ವರ್ಷಾವಧಿ ಕೊರಗಜ್ಜನ ಗಗ್ಗರ ಸೇವೆಯು ಫೆ.15 ರಂದು ನಡೆಯಲಿದೆ.


ಬೆಳಿಗ್ಗೆ 8ಕ್ಕೆ ಗಣಹೋಮ, 9 ರಿಂದ ಭಜನಾ ಸಂಕೀರ್ತನ, 10 ರಿಂದ ಪ್ರಸಿದ್ಧ ಕಲಾವಿದರಿಂದ ಸಂಗೀತ ಗಾನ, 12 ಕ್ಕೆ ಪ್ರಸನ್ನ ಪೂಜೆ, ಅಪರಾಹ್ನ 1 ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 1.30ರಿಂದ ಯಕ್ಷ-ಗಾನ-ನಾಟ್ಯ-ಹಾಸ್ಯ-ವೈಭವ ನಡೆಯಲಿದ್ದು ಭೋಜರಾಜ್ ವಾಮಂಜೂರು ಮತ್ತು ಅರವಿಂದ ಬೋಳಾರ್ ವಿಶೇಷ ಹಾಸ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಸಂಜೆ 4.30 ರಿಂದ ” ತುಳುವ ಮಣ್ಣ್ ಡ್ ಸ್ವಾಮಿ ಕೊರಗಜ್ಜೆ” ವಿಷಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಉಪನ್ಯಾಸ ನೀಡಲಿದ್ದಾರೆ.
ರಾತ್ರಿ 7 ರಿಂದ ಕೊರಗಜ್ಜನ ಗಗ್ಗರ ಸೇವೆ, ರಾತ್ರಿ 8 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಭಾಗವಹಿಸುವಂತೆ ಎಂ.ಸುಂದರ ಬೆಳ್ಚಡ, ವಿಜಯ ಸುವರ್ಣ ಪೊಳಲಿ ಹಾಗೂ ಶಿಷ್ಯವೃಂದದ ಪ್ರಕಟಣೆ ತಿಳಿಸಿದೆ.