ಬೊಳ್ಳಾಯಿ: ಸೌಹಾರ್ದ ಟ್ರೋಫಿ

ಬಂಟ್ವಾಳ: ಬೊಳ್ಳಾಯಿ ಸೌಹಾರ್ದ ಫ್ರೆಂಡ್ಸ್ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ನಡೆದ 4ನೇ ವರ್ಷದ ಹೊನಲು ಬೆಳಕಿನ ಸೌಹಾರ್ದ ಟ್ರೋಫಿ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಕ್ ಮೊದಲಾದವರು ಉಪಸ್ಥಿತರಿದ್ದರು.