ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ವತಿಯಿಂದ ಸೃಜನಶೀಲ ಕಲಾವಿದ ಮನೋಜ್ ಕನಪಾಡಿ ಅವರಿಗೆ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ಪ್ರಶಸ್ತಿ ಪ್ರದಾನ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಸೃಜನಶೀಲ ಕಲಾವಿದ, ಪೈಬರ್ ಆರ್ಟ್ ಮತ್ತು ಚಿತ್ರಕಲಾ ಲೋಕದ ಅಪೂರ್ವ ಸಾಧಕ ಮನೋಜ್ ಕನಪಾಡಿ ಅವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಕೊಡಮಾಡುವ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ” ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಪುಂಜಾಲಕಟ್ಟೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು‌ ಪ್ರದಾನ ಮಾಡಲಾಯಿತು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸ್ವಸ್ತಿಕ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಮೊದಲಾದವರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.

ಮನೋಜ್ ಕನಪಾಡಿ ಅವರ ಅನೇಕ ಕಲಾಕೃತಿಗಳು ನಾಡಿನ ಗಮನ ಸೆಳೆದಿದೆ. ಕಲಾಲೋಕದ ಪ್ರಶಂಸೆಗೆ ಪಾತ್ರವಾಗಿದೆ.
ವಾಟರ್ ಕಲರ್ ಪೈಂಟಿಂಗ್,
ಲ್ಯಾಂಡ್ ಸ್ಕೇಪ್ ಪೈಂಟಿಂಗ್,
ಆಯಿಲ್ ಪೈಂಟಿಂಗ್,
ಪೋಟೇಟ್ ಪೈಂಟಿಂಗ್,
ಥರ್ಮೋಕೋಲ್ ಡಿಸೈನ್
ಮೂರ್ತಿ ಕೆತ್ತನೆ,
ಬಣ್ಣದ ಕಾಗದದಲ್ಲಿ ಹೂಗಳು ಮತ್ತು ಹೂಗುಚ್ಛ ರಚನೆ, ಆವೆ ಮಣ್ಣಿನ ಕಲಾಕೃತಿಗಳ ರಚನೆ,
ಫೈಬರ್ ಕಲಾ ಕೃತಿಗಳ ರಚನೆ,
ಫೈಬರ್ ಕಾರಂಜಿ ಮತ್ತು ಜಲಪಾತಗಳ ರಚನೆ,
ಫೈಬರ್ ಮಾಧ್ಯಮದಲ್ಲಿ ಸಂಗೀತ ಪರಿಕರ,ಚೆಂಡೆ, ವೀಣೆ ತಬಲ ಇತ್ಯಾದಿಗಳ ರಚನೆಯಲ್ಲಿ ಇವರು ವಿಶೇಷ ಪರಿಣತರಾಗಿದ್ದು ಇವರ
ಪ್ರತಿಯೊಂದು ಕಲಾಕೃತಿಗಳು ನೈಜ ಮಾದರಿಯಲ್ಲಿ ಮೈದಳೆದು ನೋಡುಗರನ್ನು ಬೆರಗುಗೊಳಿಸುತ್ತದೆ.

ಸಂಪನ್ಮೂಲ ವ್ಯಕ್ತಿಯಾಗಿ, ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ, ಸೃಜನಶೀಲ ಮನಸ್ಸಿನ ಕಲಾವಿದರಾಗಿ ನಿರಂತರ ಹೊಸ ಪ್ರಯೋಗಗಳೊಂದಿಗೆ ಮುನ್ನಡೆಯುತ್ತಿರುವ ಮನೋಜ್ ಕನಪಾಡಿ ಅವರ ಕಲಾಸಾಧನೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿದೆ.