ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ, ಬಾಳ್ತಿಲ ಶಾಲಾ ಸಹಶಿಕ್ಷಕ ಸಂತೋಷ್ ಕುಮಾರ್ ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಬಾಳ್ತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ ಸಂತೋಷ್ ಕುಮಾರ್ ತುಂಬೆ ಅವರು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ಪುಂಜಾಲಕಟ್ಟೆಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸ್ವಸ್ತಿಕ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಮೊದಲಾದ ಗಣ್ಯರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.

ಸಾಧನೆಯ ಹೆಗ್ಗುರುತುಗಳು:

ಬಾಳ್ತಿಲ ಸರಕಾರಿ ಶಾಲೆಯಲ್ಲಿ ಒಂದೇ ದಿನ 7ತರಗತಿ ಕೊಠಡಿಗಳ ಉದ್ಘಾಟನೆ, ಆಯುರ್ವೇದ ವನ,
ಶಾಲಾ ಉದ್ಯಾನವನ, ರಾಣಿ ಅಬ್ಬಕ್ಕ ರಂಗಮಂದಿರ, ಬಯಲು ರಂಗವೇದಿಕೆ, ಕರ್ನಾಟಕ ಬ್ಯಾಂಕ್ ಹೆಣ್ಣು ಮಕ್ಕಳ ಶೌಚಾಲಯ, ಸ್ಮಾರ್ಟ್ ಕ್ಲಾಸ್, ಎಲ್ ಕೆಜಿ-ಯುಕೆಜಿ ತರಗತಿಗಳ ಆರಂಭ, ಆರರಿಂದ- ಎಂಟು ಆಂಗ್ಲ ಮಾಧ್ಯಮ ಶಿಕ್ಷಣ, ಪ್ರವೇಶದ್ವಾರ -ಇಂಟರ್ಲಾಕ್, ಶಾಲೆಗೆ ಪೇಂಟಿಂಗ್, ಕುಡಿಯುವ ನೀರಿನ ಘಟಕ, ಕೈತೊಳೆಯುವ ಘಟಕ, ಶಾಲೆಗೆ ನಾಲ್ಕು ಲಕ್ಷದಷ್ಟು ಪೀಠೋಪಕರಣ MCF ವತಿಯಿಂದ, ಫೈಬರ್ ಚೇರ್, ಧ್ವನಿವರ್ಧಕ ಇನ್ನಿತರ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳು ಒಟ್ಟು 80 ಲಕ್ಷದಲ್ಲಿ ಅನುಷ್ಠಾನಗೊಂಡಿದೆ. ಈ ಎಲ್ಲಾ ಯೋಜನೆಗಳು ಜಾರಿಯಾಗುವಲ್ಲಿ ಸಂತೋಷ್ ಕುಮಾರ್ ಅವರ ಶ್ರಮ ಮತ್ತು ಸಾಧನೆ ಅಪಾರವಾದುದು.
SDMC, ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದಾನಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು, ಊರಿನ ಪರ ಊರಿನ ದಾನಿಗಳ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು ಎನ್ನುತ್ತಾರೆ ಸಂತೋಷ್ ಕುಮಾರ್.
ವಿವಿಧ ಧಾರ್ಮಿಕ, ಸಾಮಾಜಿಕ, ಸರಕಾರಿ ಸಂಘಟನೆಗಳಲ್ಲಿಯೂ ಸಕ್ರೀಯರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರು ಸಂತೋಷ್ ಕುಮಾರ್.
ವ್ಯಕ್ತಿತ್ವದಲ್ಲಿ ಸನ್ನಡತೆ, ಕರ್ತವ್ಯದಲ್ಲಿ ದಕ್ಷತೆ, ಸೇವೆಯಲ್ಲಿ ಪ್ರಾಮಾಣಿಕತೆಯ ತತ್ವವನ್ನು ಮೈಗೂಡಿಸಿಕೊಂಡು ಸರಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಯಶಸ್ವಿಯಾದ ಸಂತೋಷ್ ಕುಮಾರ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯವಾದುದು.
ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ, ಬದುಕು ಬಂಗಾರವಾಗಲಿ, ಸರ್ವಶಕ್ತಿಗಳ ಪೂರ್ಣಾನುಗ್ರಹ ಸದಾ ಅವರ ಮೇಲಿರಲಿ ಎಂದು ಯುವಧ್ವನಿ ಬಳಗ ಶುಭ ಹಾರೈಸುತ್ತದೆ.