ಮೇ.8ರಂದು ಸಂಜೆ 3ಗಂಟೆಗೆ ಬಿ.ಸಿ.ರೋಡಿನಲ್ಲಿ ರಮಾನಾಥ ರೈ ಪರವಾಗಿ ಬೃಹತ್ ರೋಡ್ ಶೋ

ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರವಾಗಿ (ಮೇ.8) ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ.
ಬಿ.ಸಿ.ರೋಡ್ ನಾರಾಯಣಗುರು ವೃತ್ತದಿಂದ ರೋಡ್ ಶೋ ಪೊಳಲಿ ದ್ವಾರ ಕೈಕಂಬ ಜಂಕ್ಷನ್ನಲ್ಲಿ ಕೊನೆಗೊಳ್ಳಲಿದ್ದು ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ರೋಡ್ ಶೋ ಹಾಗೂ ಬಹಿರಂಗ ಸಭೆಯಲ್ಲಿ ಪಕ್ಷದ ರಾಷ್ಟ್ರ, ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ.

ರೋಡ್ ಶೋ ಸಿದ್ಧತೆ ಬಗ್ಗೆ ರೈ ಸಮಾಲೋಚನೆ:

ರೋಡ್ ಶೋ ಸಿದ್ಧತೆ ಬಗ್ಗೆ ಚುನಾವಣಾ ಕಚೇರಿಯಲ್ಲಿ ಪಕ್ಷದ ಪ್ರಮುಖರೊಂದಿಗೆ ಬಿ. ರಮಾನಾಥ ರೈ ಮಾತುಕತೆ ನಡೆಸಿದರು. ಚುನಾವಣಾ ಪ್ರಚಾರದ ಕೊನೆಗಳಿಗೆಯಲ್ಲಿ ನಡೆಯಲಿರುವ ಈ ರೋಡ್ ಶೋ ಭಾರೀ ಯಶಸ್ಸು ಕಾಣಬೇಕಾಗಿದೆ. ನಾಮಪತ್ರ ಸಲ್ಲಿಕೆ ಭಾರೀ ಯಶಸ್ಸು ಕಂಡಿದೆ. ಅದೇ ರೀತಿ ರೋಡ್ ಶೋ ಕೂಡ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಅತ್ಯಂತ ಯಶಸ್ವಿಯಾಗುವುದೆಂಬ ಭರವಸೆಯಿದೆ ಎಂದು ರೈ ಹೇಳಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲಿಗ, ಪ್ರಮುಖರಾದ ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಯಂತಿ ವಿ.ಪೂಜಾರಿ, ಸದಾಶಿವ ಬಂಗೇರ, ಸುರೇಶ್ ಬಿ. ನಾವೂರು, ಅಬ್ಬಾಸ್ ಅಲಿ, ಶಬ್ಬೀರ್ ಸಿದ್ದಕಟ್ಟೆ, ಸಂಜೀವ ಪೂಜಾರಿ, ಪದ್ಮನಾಭ ರೈ, ಶರೀಫ್, ಇಬ್ರಾಹೀಂ ನವಾಝ್, ಸುರೇಶ್ ಜೋರಾ, ಹರ್ಷದ್ ಸರವು, ಸಿದ್ದೀಕ್ ಗುಡ್ಡೆಯಂಗಡಿ, ಹಸೈನಾರ್, ನಾರಾಯಣ ನಾಯ್ಕ್, ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.