ಪರಿಶಿಷ್ಟ ಪಂಗಡದ ವ್ಯಕ್ತಿಗೆ ಮಂಜೂರಾದ ಜಮೀನಿನ ಕಡತಗಳು ನಾಪತ್ತೆ: ಜಿಲ್ಲಾಧಿಕಾರಿಗೆ ದೂರು

ಯುವಧ್ಚನಿ ನ್ಯೂಸ್-ಕರ್ನಾಟಕ

ವಾಮದಪದವು: ಪರಿಶಿಷ್ಟ ಪಂಗಡದ ವ್ಯಕ್ತಿಗೆ ಮಂಜೂರಾದ ಜಮೀನಿನ ಕಡತಗಳು ತಾಲೂಕು ಕಚೇರಿಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದ.ಕ.ಜಿಲ್ಲಾಧಿಲಾರಿಯವರಿಗೆ ದೂರು ನೀಡಲಾಗಿದೆ.
ಬಂಟ್ಚಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೈಮಾರು ನಿವಾಸಿ ಶ್ರೀನಿವಾಸ ನಾಯ್ಕ ಎಂಬವರಿಗೆ ಮಂಜೂರಾಗಿರುವ ಜಮೀನಿನ ಕಡತಗಳು ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಾಪತ್ತೆಯಾಗಿದ್ದು, ಈ ಬಗ್ಗೆ ಶ್ರೀನಿವಾಸ ನಾಯ್ಕ ಅವರ ಮಗ ಮಂಜುನಾಥ ನಾಯ್ಕ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಅಜ್ಜಿಬೆಟ್ಟು ಗ್ರಾಮದ ಕೈಮಾರು ಎಂಬಲ್ಲಿ ಸರ್ವೆ ನಂಬ್ರ 82ರಲ್ಲಿ ಡಿಸಿಡಿಆರ್: 113/85-86ರಂತೆ 2.17ಎಕರೆ ಜಮೀನನ್ನು ಪರಿಶಿಷ್ಟ ಪಂಗಡದ ಶ್ರೀನಿವಾಸ ನಾಯ್ಕ ಎಂಬವರಿಗೆ ಮಂಜೂರುಗೊಳಿಸಲಾಗಿತ್ತು.
ಸದ್ರಿ ಜಮೀನಿನಲ್ಲಿ ಮನೆ ಕಟ್ಟುವರೇ ಭೂ ದಾಖಲಾತಿಗಳು ಅಗತ್ಯವಿರುವುದರಿಂದ ಮಂಜುನಾಥ ನಾಯ್ಕ ಅವರು ಕಡತಗಳಿಗಾಗಿ ಹಲವು ಬಾರಿ ತಾಲೂಕು ಕಚೇರಿಗೆ ಅಲೆದಾಟ ನಡೆಸಿದ್ದರು. ಮಂಜೂರಾದ ಜಮೀನಿನ ಹಕ್ಕುಪತ್ರ, ನಡಾವಳಿ ಹಾಗೂ ನಕ್ಷೆಯನ್ನು ನೀಡುವಂತೆ ತಹಶೀಲ್ದಾರರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಈ ಕಡತಗಳೇ ತಾಲೂಕು ಕಚೇರಿಯಲ್ಲಿ ಲಭ್ಯವಿಲ್ಲವೆಂದು ನವಂಬರ್ 3ರಂದು ತಾಲೂಕು ಕಚೇರಿಯು ಮಂಜುನಾಥ ನಾಯ್ಕ ಅವರಿಗೆ ಹಿಂಬರಹ ನೀಡಿದೆ.
ಇದರಿಂದ ನೊಂದ ಮಂಜುನಾಥ ನಾಯ್ಕ ಅವರು ಇದೀಗ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಯವರ ಮೊರೆ ಹೋಗಿದ್ದಾರೆ.

ವರದಿ:
ಗೋಪಾಲ ಅಂಚನ್
ಸಂಪಾದಕರು:
ಯುವಧ್ಚನಿ ನ್ಯೂಸ್-ಕರ್ನಾಟಕ
ಮೊಬೈಲ್:
9449104318