ಕೆನರಾ ಕಾಲೇಜು ತುಳು ಸಂಘದಿಂದ ಕಲಸಡ್ಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಭತ್ತದ ಕಟಾವು

ಯುವಧ್ವನಿ ನ್ಯೂಸ್-ಕರ್ನಾಟಕ

ವಾಮದಪದವು: ಪೂರ್ವಜರ ಕಾಲದಿಂದಲೇ ಬೆಳೆದು ಬಂದಂತಹ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ.

ನಮ್ಮ ತಾಯಿಬೇರಾದ ಕೃಷಿಯನ್ನು ವಿದ್ಯಾರ್ಥಿಗಳು ಮರೆಯದೆ ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಯೋಗೀಶ್ ಕಲಸಡ್ಕ ಹೇಳಿದರು. ಕೆನರಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ತುಳು ಸಂಘವು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಲಸಡ್ಕದ ಪ್ರಗತಿಪರ ಕೃಷಿಕ ನೋಣಯ್ಯ ಬಂಗೇರ ಅವರ ಗದ್ದೆಯಲ್ಲಿ ಆಯೋಜಿಸಿದ ಭತ್ತದ ಕಟಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ತುಳು ಸಂಘದ ಮೂವತ್ತು ವಿದ್ಯಾರ್ಥಿಗಳು ಭತ್ತದ ಕಟಾವಿನಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತರ ದುಡಿಮೆಯ ಮಹತ್ವವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು. ಕಾಲೇಜಿನ ತುಳು ಸಂಘದ ಸಂಯೋಜಕಿ ಸವಿತಾ ಡಿ.ಕೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ

ಆಯೋಜಿಸಲಾಗಿತ್ತು
ಸ್ಥಳೀಯ ಪ್ರಮುಖರಾದ ದಯಾನಂದ ಪೂಜಾರಿ ಕೌಡೋಡಿಗುತ್ತು, ಪುಷ್ಪರಾಜ ಶೆಟ್ಟಿ, ಗಂಟರಬೆಟ್ಟು, ಚೆನ್ನಪ್ಪ ಮೂಲ್ಯ, ಭವಾನಿ ನೋಣಯ್ಯ ಬಂಗೇರ ಸಹಕರಿಸಿದರು.

ವರದಿ:
ಆಲದಪದವು ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್-ಕರ್ನಾಟಕ
ಮೊಬೈಲ್:
9449104318