ನವಂಬರ್ 12, 13ರಂದು ಅಮ್ಮುಂಜೆಯಲ್ಲಿ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ-ಸಮ್ಮೇಳನಾಧ್ಯಕ್ಷರಿಗೆ ಅಧೀಕೃತ ಆಮಂತ್ರಣ

ಬಂಟ್ವಾಳ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಮ್ಮುಂಜೆ ಸಹಭಾಗಿತ್ವದಲ್ಲಿ ನ.12, 13ರಂದು ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಬಾಲಕೃಷ್ಣ ಗಟ್ಟಿ ಅವರಿಗೆ ನೀಡಿ, ಅಧಿಕೃತವಾಗಿ ‌ಆಮಂತ್ರಿಸಲಾಯಿತು.


ಕಸಾಪ ತಾಲೂಕು ‌ಅಧ್ಯಕ್ಷ‌ ವಿಶ್ವನಾಥ ಬಂಟ್ವಾಳ, ‌ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್ ಮತ್ತು ರಮಾನಂದ ನೂಜಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೀತಾ ಎಸ್.ಕೊಂಕೋಡಿ, ವಿಟ್ಲ ಹೋಬಳಿ‌ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಮಾರ್ಗದರ್ಶನ ಮಂಡಳಿ‌ ಸದಸ್ಯರಾದ ಹರೀಶ ಮಾಂಬಾಡಿ, ಸದಸ್ಯರಾದ ರೇಖಾ ವಿಶ್ವನಾಥ್, ಪ್ರೊ. ಬಾಲಕೃಷ್ಣ ಗಟ್ಟಿ ಅವರ ಪತ್ನಿ ಮೀರಾ ಬಾಲಕೃಷ್ಣ ಗಟ್ಟಿ ಉಪಸ್ಥಿತರಿದ್ದರು.

ವರದಿ:
ಆಲದಪದವು ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊಬೈಲ್:
9449104318