ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ-20.66ಲಕ್ಷ ನಿವ್ಹಳ ಲಾಭ-ಶೇ.15ಡಿವಿಡೆಂಡ್ ಘೋಷಣೆ

ಯುವಧ್ವನಿ ನ್ಯೂಸ್,ಕರ್ನಾಟಕ

ವಾಮದಪದವು: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಚೆನ್ನೈತ್ತೋಡಿ ಶಾಲಾ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣಶೆಟ್ಟಿ ಮಂಡಿಸಿದರು.


ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ್ ಲೆಕ್ಕಪತ್ರಗಳನ್ನು ಮಂಡಿಸಿದರು.
ಸಭೆಯಲ್ಲಿ ನಿವ್ವಳ ಲಾಭವನ್ನು ವಿಂಗಡಿಸಲಾಯಿತು. ಸದಸ್ಯರಿಗೆ ಶೇಕಡ 15 ಡಿವಿಡೆಂಡ್ ಘೋಷಿಸಲಾಯಿತು. ಈ ಮೊತ್ತವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಸದಸ್ಯರು ಒಪ್ಪಿಗೆ ನೀಡಿದರು.
ನಿವ್ವಳ ಲಾಭ ರೂಪಾಯಿ 20.66 ಲಕ್ಷ ಗಳಿಸಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಶ್ರೀನಿವಾಸ್ ನಂದಿನಿ ಪಶು ಆಹಾರ ಮತ್ತು ಜಾನುವಾರುಗಳ ವಿಮೆ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು. ಸಂಘದ ಕೃತಕ ಗರ್ಭಧಾರಣ ಕಾರ್ಯಕರ್ತೆ ಶೋಭಾ ಶೆಟ್ಟಿ ಇವರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಜಿಲ್ಲಾಮಟ್ಟದ ಉತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತೆ ಪ್ರಶಸ್ತಿ ಬಂದಿದ್ದು ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಸುರೇಶ್ ಗಟ್ಟಿ, ದಿನೇಶ್ ಸಾಲಿಯಾನ್, ಧರಣಪ್ಪ ನಾಯಕ್, ಲೀಲಾವತಿ ರೈ, ಆನಂದಿ ಪೂಜಾರಿ ಹಾಜರಿದ್ದರು. ಸಂಘದ ನಿರ್ದೇಶಕರಾದ ಬೇಬಿ ಗೌಡ ಪ್ರಾರ್ಥಿಸಿ ನಿರ್ದೇಶಕ ಶ್ಯಾಮ ಪ್ರಸಾದ ಪೂಜಾ ಸ್ವಾಗತಿಸಿದರು. ಸಂಘದ ಸಿಬ್ಬಂದಿಗಳಾದ ಯಶೋಧರ, ಗುರುಪ್ರಸಾದ್, ಹರಿಶ್ಚಂದ್ರ,ಲೀಲಾಕ್ಷಿ, ರಾಕೇಶ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಅನಂತರಾಮ ನಾಯಕ ವಂದಿಸಿದರು.

?ಗೋಪಾಲ ಅಂಚನ್,ಆಲದಪದವವು
ಸಂಪಾದಕರು
ಯುವಧ್ವನಿ ನ್ಯೂಸ್ ಕರ್ನಾಟಕ