ಅಜ್ಜಿಬೆಟ್ಟು ಬಸದಿಯಲ್ಲಿ ಉತ್ತಮ ಕ್ಷಮಾವಳಿ-ಆರಾದನಾ ಮಹೋತ್ಸವ

ವಾಮದಪದವು: ಮುನಿಶ್ರೀ 108 ದಿವ್ಯಾಸಾಗರ ಮಹಾರಾಜರ ಭವ್ಯ ಮಂಗಳ ವರ್ಷಾಯೋಗ ಚಾತುರ್ಮಾಸ ಪುಣ್ಯ ಪ್ರಭಾವನ ಪ್ರಯುಕ್ತ ದಶಲಕ್ಷಣ ಪರ್ವವು ನಡೆಯುತ್ತಿದ್ದು ಇದರಂಗವಾಗಿ ಅಜ್ಜಿಬೆಟ್ಟು ಬಸದಿಯಲ್ಲಿ ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರ ಪಾವನ ಸಾನಿಧ್ಯ,ಮಂಗಳ ಪ್ರವಚನದೊಂದಿಗೆ ಸ್ವಸ್ತಿ ಶ್ರೀ ಮಧಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಿಂಹನಗದ್ದೆ ಬಸ್ತಿಮರ ನರಸಿಂಹರಾಜಪುರ ನೇತೃತ್ವದಲ್ಲಿ ಉತ್ತಮ ಕ್ಷಮಾವಳಿ ಎಂಬ ಆರಾದನಾ ಮಹೋತ್ಸವವು ಶ್ರದ್ಧಾಭಕ್ತಿಪೂರ್ವಕವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಗಾನರತ್ನ ನಿರೀಕ್ಷಾ ಜೈನ್ ಅವರ ಸಂಗೀತ ಸೌರಭ, ಅಶೋಕ್ ಕುಮಾರ್, ಸುದರ್ಶನ್ ಜೈನ್ ಮತ್ತು ಸಹೋದರ ಸಹೋದರಿಯರ ಸೇವಾಕೈಂಕರ್ಯದೊಂದಿಗೆ, ವೃಷಭರಾಜ ಇಂದ್ರ ಪೌರೋಹಿತ್ಯದಲ್ಲಿ ಕ್ಷಮಾವಳಿ ಮಹತ್ವವನ್ನು ಆಚರಿಸಲಾಯಿತು.


ನಂತರ ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ವಲಯ 8 ರ ಪ್ರಧಾನ ಕಾರ್ಯದರ್ಶಿ ಎಂ.ರಾಜೇಶ್, ಸಹಕಾರ್ಯದರ್ಶಿ ಶ್ವೇತಾ ಮೂಡಬಿದಿರೆ ಮಾಹಿತಿ ನೀಡಿದರು‌.
ವಲಯಾಧ್ಯಕ್ಷ ಪುಷ್ಪರಾಜ್ ಜೈನ್, ಪ್ರಮುಖರಾದ ಸೋಮಶೇಖರ ಶೆಟ್ಟಿ, ಪ್ರಮೋದ್ ಕುಮಾರ್, ಜಯರಾಜ್ ಕಂಬಳಿ, ಧರ್ಮಪಾಲ್ ಜೈನ್, ಶಶಿಕಲಾ ಹೆಗ್ಡೆ, ಪ್ರಮೋದ್, ಸುಭಾಶ್ಚಂದ್ರ ಜೈನ್, ಮಹಾವೀರ ಹೆಗ್ಡೆ ಮೊದಲಾದವರಿದ್ದರು.