ಆರ್ಯುವೇದದಲ್ಲಿ ಅಗ್ರಸ್ಥಾನ-ಅತೀ ಹೆಚ್ಚು ಔಷಧಿಯ ಗುಣ-ನಿತ್ಯ ಅಡುಗೆಗೆ ಉಪಯುಕ್ತವಾದ ಸೈಂಧವ ಲವಣ

ಯುವಧ್ವನಿ-ಆಹಾರ ದರ್ಶನ

ಮಂಗಳೂರು: ಜೀರ್ಣಕ್ರಿಯೆಯ ಸುಧಾರಣೆ, ಮಲಬದ್ಧತೆ- ಉಸಿರಾಟದ ಸಮಸ್ಯೆ- ಸ್ನಾಯು ಸೆಳೆತ- ಗಂಟಲು ಊತ, ನೋವು ನಿವಾರಣೆಗೆ ರಾಮಬಾಣವಾಗಿ ನಿತ್ಯ ಅಡುಗೆಯಲ್ಲಿ ಉಪಯೋಗಿಸುವ ಸೈಂಧವ ಲವಣವೆನ್ನುವುದು ನೈಸರ್ಗಿಕವಾಗಿ ಸಿಗುವ ಒಂದು ವಿಧದ ಉಪ್ಪು. ಆಂಗ್ಲ ಭಾಷೆಯಲ್ಲಿ ಪಿಂಕ್ ಸಾಲ್ಟ್/ ರಾಕ್ ಸಾಲ್ಟ್ ಎಂದು ಕರೆಯುವ ಇದು ಎಲ್ಲಾ ಉಪ್ಪಿನ ವಿಧಗಳ ಪೈಕಿ ಅತ್ಯುತ್ತಮ ಎನ್ನಲಾಗುತ್ತಿದೆ.
ಔಷಧಿ ರೂಪದಲ್ಲಿ, ಅದರಲ್ಲೂ ಮನೆ ಮದ್ದಿನ ವಿಚಾರದಲ್ಲಿ ವಿಶೇಷ ಸ್ಥಾನಮಾನವಿರುವ ಸೈಂಧವ ಲವಣ
ಹೆಚ್ಚು ಔಷಧೀಯ ಗುಣ ಹೊಂದಿದ್ದು ಈ ಉಪ್ಪಿಗೆ ಆಯುರ್ವೇದದಲ್ಲಿ ಅಗ್ರಸ್ಥಾನವಿದೆ. ಚರಕ ಸಂಹಿತೆಯ ಪ್ರಕಾರ ಇದು ಆಹಾರ ಅಥವಾ ಅಡುಗೆಗಳಲ್ಲಿ ಪ್ರತಿದಿನ ಬಳಸಬಹುದಾದ ಉಪಯುಕ್ತ ವಸ್ತುವಾಗಿದೆ.

ಸೈಂಧವ ಲವಣದ ಉಪಯೋಗಗಳು:

1.ಜೀರ್ಣಕ್ರಿಯೆ ಸುಧಾರಣೆ

ಸೈಂಧವ ಲವಣ ಸೇವನೆಯಿಂದ ಅಜೀರ್ಣ, ಹೊಟ್ಟೆನೋವು, ಹೊಟ್ಟೆಉರಿ, ಅಸಿಡಿಟಿಯಂತಹ ಸಮಸ್ಯೆಗಳು ನಿವಾರಣೆಯಾಗಿ ಹೊಟ್ಟೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಹಸಿವು ಕಡಿಮೆ ಇದ್ದವರು ಊಟಕ್ಕೆ ಮುಂಚಿತವಾಗಿ ಸ್ವಲ್ಪ ಪ್ರಮಾಣದ ಸೈಂಧವ ಲವಣವನ್ನು ಸ್ವಲ್ಪ ಶುಂಠಿಯ ಜೊತೆಗೆ ಸೇವಿಸದರೆ ಜೀರ್ಣ ಶಕ್ತಿ ಹೆಚ್ಚಿ ಹಸಿವಿನ ಶಕ್ತಿಯು ವೃದ್ಧಿಸುತ್ತದೆ.

  1. ಮಲಬದ್ಧತೆ ನಿವಾರಕ

ಈ ಉಪ್ಪಿನ ಸೇವನೆಯಿಂದಾಗಿ ಹೊಟ್ಟೆಯಲ್ಲಿ ಜೀರ್ಣಕಾರಿ ರಸ ಹೆಚ್ಚು ಉತ್ಪತ್ತಿಯಾಗಿ ಇದು ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ.

  1. ಉಸಿರಾಟದ ಸಮಸ್ಯೆ ನಿವಾರಣೆ

ಈ ಲವಣದಲ್ಲಿರುವ ಐರನ್, ಝಿಂಕ್, ನಿಕ್ಕಲ್, ಕಾಪರ್,ಕೋಬಾಲ್ಟ್, ಮ್ಯಾಗನೀಸ್‍ನಂತಹ ಹಲವಾರು ಖನಿಜಾಂಶಗಳು ದೇಹದ ಆರೋಗವನ್ನು ಉತ್ತಮ‌ ಪಡಿಸುವ ಜತೆಯಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕಫವನ್ನು ಮೃದುಗೊಳಿಸುವ ಶಕ್ತಿ ಹೊಂದಿದ್ದು ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ.

  1. ಸ್ನಾಯು ಸೆಳೆತ ನಿವಾರಕ

ಸೈಂಧವ ಲವಣದಲ್ಲಿರುವ ಎಲೆಕ್ಟ್ರೋಲೈಟ್ಸ್ ಗಳು ನರ ಮತ್ತು ಸ್ನಾಯುಗಳ ಕಾರ್ಯವನ್ನು ಸುಧಾರಿಸಿ ಸ್ನಾಯು ಸೆಳೆತವನ್ನು ನಿವಾರಿಸುತ್ತದೆ. ದೇಹದ ಹೈಡ್ರೇಷನ್ ಕಡಿಮೆ ಮಾಡಲು ಸಹ ಈ ಲವಣ ಸಹಕಾರಿಯಾಗಿದೆ.

  1. ಗಂಟಲು ಊತ, ನೋವು ನಿವಾರಣೆ

ಸೈಂಧವ ಲವಣ ಮಿನರಲ್ಸ್ ಗಳ ಆಗರವಾಗಿದ್ದು ಗಂಟಲು ಊತ, ನೋವು ಹೊಂದಿರುವವರು ಈ ಉಪ್ಪಿನಿಂದ ಗಾರ್ಗ್ಲಿಂಗ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ದೇಹದಲ್ಲಿ ಇಮ್ಯುನಿಟಿ ಪವರ್/ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜತೆಯಲ್ಲಿ ಮಾನಸಿಕ ಒತ್ತಡ, ಚರ್ಮ ಹಾಗೂ ತಲೆಕೂದಲಿನ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿಯೂ ಸೈಂಧವ ಲವಣ ಬಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಔಷಧೀಯ ಗುಣ ಹೊಂದಿರುವ ಸೈಂಧವ ಲವಣವನ್ನು ನಿತ್ಯ ಆಹಾರದಲ್ಲಿ ಹಿತಮಿತವಾಗಿ ಬಳಸುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ.

ಸೈಂಧವ ಲವಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:

ದೇಸಿ ಚಾವಡಿ ಆಲದಪದವು ವಾಮದಪದವು, ಬಂಟ್ವಾಳ ತಾಲೂಕು, ದ.ಕ.
9449104318, 9663582420

?️ಗೋಪಾಲ ಅಂಚನ್, ಆಲದಪದವು