ವಿದ್ಯೆಯೊಂದಿಗೆ ವಿನಯ ಬದುಕಿನ ಆದರ್ಶವಾಗಲಿ-ಡಾ.ತುಕಾರಾಮ ಪೂಜಾರಿ ಕೊರಂಟಬೆಟ್ಟುಗುತ್ತು:ವಿದ್ಯಾರ್ಥಿಗಳಿಗೆ ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಧಾರ್ಮಿಕ ಕ್ಷೇತ್ರಗಳಲ್ಲಿ ಆರಾಧನೆ ಸತ್ಕರ್ಮಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳು ನಡೆದಾಗ ಯೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿ ಹೇಳಿದ್ದಾರೆ.

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊರಂಟಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಭಾನುವಾರ ನಡೆದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ ಅಭಿನಂದನೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ಪ್ರಧಾನ ಭಾಷಣ ಮಾಡಿದರು.

ಆರಾಧನಾಲಯಗಳು ಸಾಂಸ್ಕ್ರತಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಸಹಿತ ಸಾಮಾಜಿಕ ಪರಿವರ್ತನೆಯ ಇತರ ಕೈಂಕರ್ಯಗಳಲ್ಲಿಯೂ ತೊಡಗಿಸಿಕೊಂಡಾಗ ಸುಸಂಸ್ಕ್ರತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದ ತುಕಾರಾಮ ಪೂಜಾರಿ ಅವರು ಕೊರಂಟಬೆಟ್ಟು ಕ್ಷೇತ್ರದಲ್ಲಿ ಇಂತಹ ಶೈಕ್ಷಣಿಕ ಸೇವೆ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಶೋಷಿತ ಸಮಾಜದ ಧ್ವನಿಯಾಗುವ ನಾಯಕತ್ವ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಡಾ.ದೇವರಾಜ ಅರಸರ ತತ್ವಾದರ್ಶ ಅನುಕರಣೀಯವಾಗಿದೆ. ವಿದ್ಯಾರ್ಥಿಗಳು ದೇವರಾಜ ಅರಸು ಅವರಂತಹ ಮಹನೀಯರ ಆದರ್ಶಗಳನ್ನು ಕೈಗೂಡಿಸಿಕೊಳ್ಳುವುದರೊಂದಿಗೆ ವಿದ್ಯೆಯೊಂದಿಗೆ ವಿನಯತೆಯನ್ನು ಬದುಕಿನಲ್ಲಿ ಪಾಲಿಸುವ ಮೂಲಕ ಸಮಾಜಕ್ಕೆ ಆದರ್ಶವಾಗಬೇಕಾಗಿದೆ ಎಂದು ಹೇಳಿದರು.

ಅಭಿನಂದನೆ-ವಿದ್ಯಾರ್ಥಿ ವೇತನ ವಿತರಣೆ:

ಸುಲೋಚನಾ ದತ್ತರಾಮ್ ಗಾಯಕ್ ವಾಡ್ ಸ್ಮರಣಾರ್ಥ ಅನಿಲ್ ಡಿ.ಗಾಯಕ್ ವಾಡ್ ಮುಂಬೈ ಮತ್ತು ಚೆನ್ನಮ್ಮ ಸುಬ್ಬ ಪೂಜಾರಿ ಸ್ಮರಣಾರ್ಥ ಕೆ.ಸದಾನಂದ ಪೂಜಾರಿ ಕೊರಂಟಬೆಟ್ಟುಗುತ್ತು ಇವರ ಕೊಡುಗೆಯಾಗಿ
ಎಸ್.ಎಸ್.ಎಲ್.ಸಿ ಮತ್ತು
ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಗರಡಿ ಫ್ರೆಂಡ್ಸ್ ವತಿಯಿಂದ ಸಂಪಾ ಶ್ರೀನಿವಾಸನಗರ ಅವರಿಗೆ ಆರೋಗ್ಯದ ವೆಚ್ಚಕ್ಕಾಗಿ ಸಹಾಯಧನ ವಿತರಿಸಲಾಯಿತು. ಡಾ.ತುಕಾರಾಮ ಪೂಜಾರಿಯವರ ತುಳು ಬದುಕು ವಸ್ತು ಸಂಗ್ರಾಲಯದ ಸಾಧನೆಯನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕೆ.ಸದಾನಂದ ಪೂಜಾರಿ ಕೊರಂಟಬೆಟ್ಟುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಗಂಗಾಧರ ಅಸ್ರಣ್ಣ ಪೆಜಕ್ಕಳ ಅನುಗ್ರಹ ಮಾತುಗಳನ್ನಾಡಿದರು.
ಉಧ್ಯಮಿ ವಿಶ್ವನಾಥ ಬಂಗೇರ, ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಬಾಬು ಪೂಜಾರಿ ಕೌಡೋಡಿ, ಕುಟುಂಬದ ಯಜಮಾನ ಜಿನ್ನಪ್ಪ ಪೂಜಾರಿ, ಕೋಟ್ಯಾನ್ ಕುಟುಂಬ ಸಮಿತಿ ಅಧ್ಯಕ್ಷ ದೀಪಕ್ ಪುತ್ತೂರು, ಪ್ರಶಾಂತ್ ಕೋಟ್ಯಾನ್ ಎಡ್ತೂರು ಮೇಗಿನ ಮನೆ, ಗರಡಿ ಫ್ರೇಂಡ್ಸ್ ಅಧ್ಯಕ್ಷ ಯೋಗೀಶ್ ಕುಮಾರ್ ನಾಯರ್ಕುಮೇರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎ.ಕೃಷ್ಣಪ್ಪ ಪೂಜಾರಿ ಆಲದಪದವು ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ದೀಪಕ್ ಪುತ್ತೂರು ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಆಲದಪದವು ಕಾರ್ಯಕ್ರಮ ನಿರೂಪಿಸಿದರು.

ಬೈದರ್ಕಳ ದರ್ಶನ ಸೇವೆ:

ಕ್ಷೇತ್ರದಲ್ಲಿ ಬೆಳಿಗ್ಗೆ ಧರ್ಮದೈವಗಳಿಗೆ ಹಾಗೂ ಕುಟುಂಬದ ದೈವಗಳಿಗೆ ಪರ್ವಸೇವೆ, ನಂತರ ಬ್ರಹ್ಮಬೈದರ್ಕಳ ದರ್ಶನ ಸೇವೆ ಸಂಪನ್ನಗೊಂಡಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

?️ಗೋಪಾಲ ಅಂಚನ್,ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್, ಕರ್ನಾಟಕ
ಮೊ: 9449104318
[email protected]
www.yuvadhwani.com