ವಾಮದಪದವು: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಥ್ರೋ ಬಾಲ್ ಪಂದ್ಯಾಟ-

ವಾಮದಪದವು: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಥ್ರೋ ಬಾಲ್ ಪಂದ್ಯಾಟವು ಸೋಮವಾರ ಚೆನ್ನೈತ್ತೋಡಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಆಚಾರ್ಯ, ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.


ಸಂಜೆ ನಡೆದ ಕ್ರೀಡಾಕೂಟದ ಸಮಾರೂಪ ಸಮಾರಂಭದಲ್ಲಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸದಸ್ಯ ಲಿತೇಶ್, ವಾಮದಪದವು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಮೊದಲಾದವರಿದ್ದು ಬಹುಮಾನ ವಿತರಿಸಿದರು.
ವಲಯಮಟ್ಟದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚೆನ್ನೈತ್ತೋಡಿ ಶಾಲೆಯ ತಂಡ ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ಹಿರಿಯ ಪ್ರಾಥಮಿಕ ಶಾಲೆ ಉಳಿ ಕಕ್ಕೆಪದವು ಪಡೆದುಕೊಂಡಿದೆ
ವಲಯ ಮಟ್ಟದ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ

ಪ್ರಥಮ ಸ್ಥಾನವನ್ನು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಸ್ಯ ಪಡೂರು, ದ್ವಿತೀಯ ಸ್ಥಾನವನ್ನು ಸೆಂಟ್ ಜೋಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆ ( ಕನ್ನಡ ಮಾಧ್ಯಮ) ಪಡೆದುಕೊಂಡಿದೆ.