ಮನೆ ಮನೆಯ ಅಮೃತ ಸಂಜೀವಿನಿ-“ವಿವೇಝಾ”ಆರ್ಯುವೇದಿಕ್ ಆರೋಗ್ಯ ಪಾನೀಯ

ಯುವಧ್ವನಿ-ಆರೋಗ್ಯ ದರ್ಶನ

ಮಂಗಳೂರು:
ಪ್ರಸಕ್ತ ಸನ್ನಿವೇಶದಲ್ಲಿ ಮನುಕುಲವನ್ನು ಕಾಡುತ್ತಿರುವ ಬಹುತೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ “ವಿವೇಝಾ” ಎಂಬ ಆರ್ಯುವೇದಿಕ್ ಆರೋಗ್ಯ ಪಾನೀಯ ಇದೀಗ ಮನೆ ಮನೆಯ ಅಮೃತ ಸಂಜೀವಿನಿಯಾಗಿ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಕಲುಷಿತ ನೀರು, ವಿಷಮಯ ಗಾಳಿ, ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆ, ದೈಹಿಕ ವ್ಯಾಯಾಮದ ಕೊರತೆ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಇಂದು ಮಾನವ ಒಂದಲ್ಲೊಂದು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದು, ಆರೋಗ್ಯಯುತ ನೆಮ್ಮದಿಯ ಜೀವನವನ್ನು ನಡೆಸುವುದೇ ಪ್ರತಿಯೊಬ್ಬರ ಪ್ರಾಥಮಿಕ ಸವಾಲಾಗಿದೆ.

ಇಂತಹ ಸಂದರ್ಭದಲ್ಲಿ ಮನುಷ್ಯನನ್ನು ಈಗಾಗಲೇ ಕಾಡುತ್ತಿರುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ, ರೋಗ ನಿರೋಧಕ ಶಕ್ತಿ ಹಾಗೂ ಇಮ್ಯುನಿಟಿ ಪವರ್ ಅನ್ನು ಹೆಚ್ಚಿಸುವಲ್ಲಿ ವಿವೇಝಾ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ವಿವೇಝಾ ಬಳಕೆದಾರರ ಅಭಿಪ್ರಾಯ.

“ವಿವೇಝಾ”- ಇದು ಔಷಧಿಯಲ್ಲ, ಬದಲಾಗಿ “ಪ್ರಿವೆನ್ಸನ್ ಈಸ್ ಬೆಟರ್ ದ್ಯಾನ್ ಕ್ಯೂರ್” ಎಂಬ ಘೋಷಣೆಯ ಪ್ರತೀಕವಿದು. ಇದು ಕೇವಲ ಅನಾರೋಗ್ಯವಂತರು ಮಾತ್ರ ಉಪಯೋಗಿಸುವ ಪಾನೀಯವೂ ಅಲ್ಲ. ಬದಲಾಗಿ ಆರೋಗ್ಯವಂತರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿತ್ಯ ಬಳಸುತ್ತಿರುವ ಬದುಕಿನ ರಕ್ಷಾಕವಚವೆಂದೇ ವಿವೇಝಾವನ್ನು ವ್ಯಾಖ್ಯಾನಿಸಲಾಗಿದೆ.

” ವಿವೇಝಾ”- ಇದೊಂದು ಬೆರೀಸ್ ಬ್ಲೆಂಡ್. ಸಿರಪ್, ಟಾನಿಕ್ ಅಥವಾ ಕಷಾಯ ರೂಪದಲ್ಲಿರುವ ಈ ಪಾನೀಯ ದೇಹದಲ್ಲಿರುವ ಕಲ್ಮಶಗಳನ್ನು ಶುದ್ಧೀಕರಿಸುವುದರೊಂದಿಗೆ, ದೇಹದ ಪ್ರತಿಯೊಂದು ಅಂಗಾಂಗಗಳ ಸಮರ್ಪಕ ಕಾರ್ಯನಿರ್ವಹಣೆಗೆ ಉತ್ತೇಜನ ನೀಡುವ ಮೂಲಕ ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಸುತ್ತದೆ. ಮನುಕುಲವನ್ನು ಕಾಡುತ್ತಿರುವ ಬಹುತೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಈ ಆರ್ಯುವೇದಿಕ್ ಆರೋಗ್ಯ ಪಾನೀಯ ಆಶಾಕಿರಣವಾಗಿದೆ ಎನ್ನುತ್ತಾರೆ ರಾಜ್ಯದ ವೆಲ್ ನೆಸ್ ತಜ್ಞರು.

16ಕ್ಕೂ ಹೆಚ್ಚು ಬಗೆಯ ವಿಶಿಷ್ಠ( ಬೆರೀಸ್) ಹಣ್ಣುಗಳ ಔಷಧಿಯ ಅಂಶಗಳ ಸಾರವಾಗಿರುವ ಈ ಪಾನೀಯವನ್ನು ಆರೋಗ್ಯ ಸಮಸ್ಯೆ ಇರುವವರು ಮತ್ತು ಯಾವುದೇ ಸಮಸ್ಯೆ ಇಲ್ಲದವರು ನಿತ್ಯ ಬಳಸುವ ಮೂಲಕ ತಮ್ಮ ಆರೋಗ್ಯವನ್ನು ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದಾಗಿದೆ. ಈ ಆರೋಗ್ಯ ಪಾನೀಯದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಪ್ರಸಕ್ತ ಸನ್ನಿವೇಶದಲ್ಲಿ ಮನುಷ್ಯರನ್ನು ಕಾಡುತ್ತಿರುವ ವಿವಿಧ ರೋಗರುಜಿನಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.

ಯಾವುದೇ ಅಡ್ಡ ಪರಿಣಾಮವಿಲ್ಲದ ಈ ಪಾನೀಯವನ್ನು ಈಗಾಗಲೇ ಮಕ್ಕಳಿಂದ ವೃದ್ದರಾದಿ ಎಲ್ಲರೂ ಸೇವಿಸುತ್ತಾ ನಿತ್ಯ ಉತ್ಸಾಹ-ಉಲ್ಲಾಸದ ಜೀವನ ನಡೆಸುತ್ತಿರುವುದು ಮತ್ತು ದಿನೇ ದಿನೇ ಈ ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು “ವಿವೇಝಾ”ದ ಪರಿಣಾಮಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

” ನನ್ನ ಆರೋಗ್ಯ ನನ್ನ ಜವಾಬ್ಧಾರಿ-ನನ್ನ ಕುಟುಂಬದ ಆರೋಗ್ಯವೂ ನನ್ನ ಜವಾಬ್ಧಾರಿ” ಎನ್ನುವ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ” ವಿವೇಝಾ” ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ವಿವೇಝಾ”ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ: 9663582420 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

?️ಯಕ್ಷಪಿತ ಮಂಗಳೂರು