ಆಲದಪದವಿನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು, ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ

ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವು ಸಂಘದ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಹಾಗೂ ಗುರು ಪೂಜೋತ್ಸವವು ಭಾನುವಾರ ಸ್ವಾಮೀಜಿ, ಗಣ್ಯಾತಿಗಣ್ಯರು‌ ಹಾಗೂ ಸಹಸ್ರಾರು ಸಮಾಜ ಸಮಕ್ಷಮದಲ್ಲಿ ಅತ್ಯಂತ ವೈಭವಯುತವಾಗಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು.


ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ, ಬಿಲ್ಲವ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಎಲ್ಲಾ ಸ್ತರಗಳಲ್ಲಿ ಮುಂಚೂಣಿಗೆ ಬರುವಲ್ಲಿ ಈ ಸಮುದಾಯ ಭವನ ಪ್ರೇರಣೆಯಾಗಲಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವೇದಿಕೆ ಉದ್ಘಾಟಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಥಳದಾನಿ ಮೋನಪ್ಪ ಪೂಜಾರಿ ಪಾಲೆದಡಿ ನಾಮಫಲಕ ಅನಾವರಣಗೊಳಿಸಿದರು.

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಗುಣಪ್ರಸಾದ್ ಕಾರಂದೂರು ಉಪನ್ಯಾಸ ನೀಡಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಪಂಚಾಯತು ಮಾಜಿ ಸದಸ್ಯ ರಮೇಶ ಪೂಜಾರಿ ಕುಡ್ಮೇರು, ಚೆನ್ನೈತ್ತೋಡಿ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಇರ್ವತ್ತೂರು ಗ್ರಾಮ ಪಂಚಾಯತು ಅಧ್ಯಕ್ಷ ಎಂ.ಪಿ.ಶೇಖರ ಪೂಜಾರಿ, ಪಿಲಾತಬೆಟ್ಟು ಗ್ರಾಮ ಪಂಚಾಯತು ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಪ್ರಮುಖರಾದ ಜಗನ್ನಾಥ ಬಂಗೇರಾ ಬೆಂಗಳೂರು, ಜಯರಾಮ ಅಮೀನ್ ಕಕ್ಕಿಬೆಟ್ಟು,ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಪೂಜಾರಿ ಬಾಳಿಕೆ, ಸಂಜೀವ ಪೂಜಾರಿ ಗುರುಕೃಪ, ಪ್ರಕಾಶ್ ಬಂಗೇರಾ ಕಲ್ಲುಕೊಡಂಗೆ, ಗೋಪಾಲ ಬಂಗೇರಾ ಸಿದ್ಧಕಟ್ಟೆ, ಗಂಗಾಧರ ಹೊಸಮನೆ, ಶೇಖರ ಪೂಜಾರಿ ಅಗಲೋಡಿ, ಮೋನಪ್ಪ ಪೂಜಾರಿ ಕಂಡೆತ್ಯಾರು, ಜಗದೀಶ್ ಕೊಯಿಲ, ಹರಿಣಾಕ್ಷಿ, ವಿನೋದ್ ಸಾಲ್ಯಾನ್, ಲಿತೇಶ್ ಪೂಜಾರಿ, ಅಣ್ಣಿ ಪೂಜಾರಿ ಬೆಟ್ಟುಗದ್ದೆ, ಪುಷ್ಪಾ ರಾಮಣ್ಣ ಪೂಜಾರಿ ಗಂಟಾರಬೆಟ್ಟು, ದಾಮೋದರ ಪೂಜಾರಿ ಮನ್ಯ, ಕಿಶೋರ್ ಕುಮಾರ್ ನಾಯರ್ಕುಮೇರು, ಸಂದೀಪ್ ಪೂಜಾರಿ ಗಂಟಾರಬೆಟ್ಟು, ಗೋಪಾಲ ಅಂಚನ್ ಆಲದಪದವು, ಸಂಜೀವ ಪೂಜಾರಿ ಪಿಲಿಂಗಾಲು, ಪ್ರೇಮನಾಥ್ ಕೆ, ಲೋಕೇಶ್ ಸುವರ್ಣ ಅಲೆತ್ತೂರು ಅತಿಥಿಗಳಾಗಿ ಭಾಗವಹಿಸಿದರು.


ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯದರ್ಶಿ ಚಂದಪ್ಪ ಪೂಜಾರಿ ಆಗಮೆ ಸ್ವಾಗತಿಸಿದರು. ರೂಪೇಶ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಕೀರ್ತನ್ ಕುಮಾರ್ ಕುದ್ಕಂದೋಡಿ ಮನವಿ ಪತ್ರ ವಾಚಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.


ಸಂಘದ ಅಭಿವೃದ್ಧಿಗೆ ಸಹಕರಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ, ಸ್ಥಳದಾನಿ ಮೋನಪ್ಪ ಬಂಗೇರಾ ಅವರನ್ನು ಸನ್ಮಾನಿಸಲಾಯಿತು.


ಸ್ವಾಮೀಜಿಯವರನ್ನು ಶ್ರೀನಿವಾಸ ನಗರ ಶಾಲಾ ಬಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಸಲಾಯಿತು.
ಬೆಳಿಗ್ಗೆ ಗುರು ಪೂಜೋತ್ಸವ,
ಮಧ್ಯಾಹ್ನ ಅನ್ನಂತರ್ಪಣೆ, ನಂತರ ದೇಯಿ ಬೈದೆದಿ ಚಲನಚಿತ್ರ ಪ್ರದರ್ಶನ ನಡೆಯಿತು.
ಅಪಾರ ಸಂಖ್ಯೆಯಲ್ಲಿ ಸಮಾಜ ಬಂಧುಗಳು ಸಮಾರಂಭದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

✍?ಗೋಪಾಲ ಅಂಚನ್