ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಹಲೆಪ್ಪಾಡಿ ಮೆ.15ರಂದು ಶ್ರೀ ರಾಮಾಂಜನೇಯ ಭಜನಾ ಮಂದಿರ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆ

ವಾಮದಪದವು: ಬಂಟ್ಚಾಳ ತಾಲೂಕಿನ‌ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ಶ್ರೀ ರಾಮಾಂಜನೇಯ ಭಜನಾ ಮಂದಿರದ ಉದ್ಘಾಟನೆ ಹಾಗೂ ಶ್ರೀ ದೇವರ ಪ್ರತಿಷ್ಠೆಯು ಮೆ.15ರಂದು ನಡೆಯಲಿದೆ.


ಬೆಳಿಗ್ಗೆ 8 ರಿಂದ ಆಶ್ಲೇಷಾ ಬಲಿ ಪೂಜೆ, ಗಣಹೋಮ, ರಾಮತಾರಕ ಮಂತ್ರ ಹೋಮ, 10.30ಕ್ಕೆ ಶ್ರೀ ರಾಮ ದೇವರ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7 ಕ್ಕೆ ಭಜನಾ ಮಂಗಳ, ಮಹಾಪೂಜೆ ನಡೆಯಲಿದೆ.
ಬೆಳಿಗ್ಗೆ 11ರಿಂದ ಧಾರ್ಮಿಕ ಸಭೆ ನಡೆಯಲಿದ್ದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಪುಂಜಾಲಕಟ್ಟೆ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಡಾ.ವರದರಾಜ ಪೈ, ದೀರಜ್ ನಾಯ್ಕ್ ನಡಿಗುತ್ತು, ಭಾರತಿ ರಾಜೇಂದ್ರ, ಎಂ.ಪಿ.ಶೇಖರ್, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಮೋನಪ್ಪ ಪೂಜಾರಿ ಕಂಡೆತ್ಯಾರು, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಶ್ರೀನಿವಾಸ ಪಿ.ಅತ್ತಾಜೆ, ಜಯಾನಂದ ಪಿ., ಯಶೋಧರ ಸಾಲ್ಯಾನ್, ಮೋಹನ್ ಶೆಟ್ಟಿ ನರ್ವಲ್ದಡ್ಡ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು.
ಈ ಪ್ರದೇಶದಲ್ಲಿ ಕಳೆದ 12 ವರ್ಷಗಳಿಂದ ಹಿರಿಯರು ಮತ್ತು ಯುವಕರು ಸೇರಿ ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು.
ಈ ಪ್ರದೇಶದಲ್ಲಿರುವ ಚಿಕ್ಕದಾದ ಅಂಗಡಿ ಕೋಣೆಯಲ್ಲಿ ಭಜನಾ ಸೇವೆ ನಡೆಯುತ್ತಿದ್ದು, ಈ ಭಾಗದಲ್ಲಿ ಜನತೆಗೆ ಶ್ರದ್ಧಾಕೇಂದ್ರವೊಂದು ಬೇಕು ಎಂಬು ಉದ್ಧೇಶದಿಂದ ಶ್ರೀ ರಾಮಾಂಜನೇಯ ಭಜನಾ ಮಂದಿರದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಇದೀಗ ಅಂದಾಜು ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಭಜನಾ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.
ಚೇತನ್ ಕುದ್ಕಂದೋಡಿ
ಗೌರವಾಧ್ಯಕ್ಷರು, ಕಿರಣ್ ಕೋಟ್ಯಾನ್ ಹಳೆಪ್ಪಾಡಿ ಅಧ್ಯಕ್ಷರು, ಡಾ.ರಾಮಕೃಷ್ಣ ಎಸ್.ಉಪಾಧ್ಯಕ್ಷರು, ವಿನೋದ್ ಪೂಜಾರಿ ಹಲೆಪ್ಪಾಡಿ ಪ್ರಧಾನ ಕಾರ್ಯದರ್ಶಿ,ನಾಗೇಶ್ ಶೆಟ್ಟಿ ಎರ್ಮೆನಾಡು ಸಂಘಟನಾ ಕಾರ್ಯದರ್ಶಿ, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು ಕೋಶಾಧಿಕಾರಿ ಮತ್ತು ಪದಾಧಿಕಾರಿಗಳ ತಂಡ ಕಾರ್ಯಕ್ರಮಗಳ ಯಶಸ್ವಿಗಾಗಿ ತೊಡಗಿಸಿಕೊಂಡಿದೆ.

✍?ಗೋಪಾಲ ಅಂಚನ್