ಮೂಡುಪಡುಕೋಡಿ; ಶೋಧನಾ-2022 ವಿಶೇಷ ಬೇಸಿಗೆ ಶಿಬಿರ

ಬಂಟ್ವಾಳ: ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ಬಿ.
ಸಿ.ರೋಡು ಮತ್ತು ಅಕ್ಷರ ಪ್ರತಿಷ್ಠಾನ ಆಲದಪದವು ಆಶ್ರಯದಲ್ಲಿ ಶ್ರೀ ಶಾರದೋತ್ಸವ ಸಮಿತಿ ಇರ್ವತ್ತೂರು ಪದವು ಮತ್ತು ಶಾಲಾಭಿವೃದ್ಧಿ ಸಮಿತಿ ಸಹಯೋಗದೊಂದಿಗೆಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಐದು ದಿನಗಳ ಶೋಧನಾ -2022 ವಿಶೇಷ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ದೊರೆತಿದೆ.


ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರ್ ಮಾರ್ ಚೆಂಡೆ ಬಾರಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಇಂತಹ ಶಿಬಿರಗಳಲ್ಲಿ ಮಕ್ಕಳು ಸಕ್ರೀಯವಾಗಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇರ್ವತ್ತೂರು ಗ್ರಾಮ ಪಂಚಾಯತು ಅಧ್ಯಕ್ಷ ಎಂ.ಪಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು.


ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಶಿಬಿರಗಳು ನೆರವಾಗುತ್ತದೆ. ಪೋಷಕರು ಇಂತಹ ಶಿಬಿರಗಳ ಮಹತ್ವವನ್ನು ಅರಿತು ಮಕ್ಕಳ ಸಮಗ್ರ ವಿಕಸನಕ್ಕೆ ಸಹಕರಿಸಬೇಕು ಎಂದು ಅವರು ಹೇಳಿದರು.
ಉಧ್ಯಮಿ ಶೇಖರ ಪೂಜಾರಿ ಅಗಲೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಕಯ್ಯಾಬೆ, ಶಾಲಾ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಶುಭ ಹಾರೈಸಿದರು.
ಅಕ್ಷರ ಪ್ರತಿಷ್ಠಾನ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಸ್ವಾಗತಿಸಿದರು. ಯಕ್ಷಲೋಕ ಸಂಚಾಲಕಿ ಪ್ರತಿಮ ಜಿ.ಅಂಚನ್ ವಂದಿಸಿದರು. ಶಿಬಿರ ನಿರ್ದೇಶಕ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.


ಎಪ್ರಿಲ್ 22 ರವರೆಗೆ ಶಿಬಿರ ನಡೆಯಲಿದ್ದು 5ನೇ ತರಗತಿಯಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ಭಾಗವಹಿಸಲು ಅವಕಾಶವಿದೆ. ಶಿಬಿರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳು ಚಿತ್ರಕಲೆ, ಮುಖವಾಡ ತಯಾರಿಕೆ, ರಂಗಕಲೆ, ಹಾಡುಗಳು, ನೃತ್ಯ, ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳಲ್ಲಿ ಸೃಜನ ಶೀಲ ಚಟುವಟಿಕೆಗಳ ಮೂಲಕ ತರಬೇತಿ ನೀಡಲಿದ್ದಾರೆ.