ಅಜ್ಜಿಬೆಟ್ಟು ಗ್ರಾಮದಲ್ಲಿ ಬಡಮಹಿಳೆ ಮನೆ ಕಟ್ಟಲು ಆದಪ್ಪ ಮಡಿವಾಳ ಮತ್ತು ರೋಹಿತ್ ಮಡಿವಾಳ ಅಡ್ಡಿ- ಡಿಸಿಗೆ ದೂರು

ವಾಮದಪದವು: ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಆಲದಪದವು ಶ್ರೀನಿವಾಸ ನಗರ ಎಂಬಲ್ಲಿ ಬಡಮಹಿಳೆಯೊಬ್ಬರು ಸರಕಾರ ನೀಡಿದ ನಿವೇಶನದಲ್ಲಿ ಮನೆ ಕಟ್ಟುವರೇ ಸ್ಥಳೀಯ ನಿವಾಸಿಗಳಾದ ಆದಪ್ಪ ಮಡಿವಾಳ ಮತ್ತು ರೋಹಿತ್ ಮಡಿವಾಳ ಎಂಬವರು ಅಡ್ಡಿಪಡಿಸುತ್ತಿರುವ ಬಗ್ಗೆ ನೊಂದ ಮಹಿಳೆ ರೋಹಿಣಿ ಎಂಬವರು ಚೆನ್ನೈತ್ತೋಡಿ ಗ್ರಾಮ ಪಂಚಾಯತು ಮತ್ತು ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ನಾನು ಬಡವಳಾಗಿದ್ದು ವಯೋಸಹಜ ಅನಾರೋಗ್ಯ ಪೀಡಿತಳಾಗಿದ್ದೇನೆ.
ನನಗೆ ಯಾವುದೇ ಆಸ್ತಿ, ಭೂಮಿ‌ ಹಾಗೂ ಕಟ್ಟಡವಿರುವುದಿಲ್ಲ.ನನ್ನೊಂದಿಗೆ ನನ್ನ ಗಂಡ, ಮಗ, ಸೊಸೆ ಸಹಿತ ಮೊಮ್ಮಕ್ಕಳು ಜತೆಗಿದ್ದು ಕಳೆದ 35 ವರ್ಷಗಳಿಂದ ನಾನು ಸಂಸಾರ ಸಹಿತ ಅಜ್ಜಿಬೆಟ್ಟು ಗ್ರಾಮದ ಆಲದಪದವು ಶ್ರೀನಿವಾಸ ನಗರ ಶಾಲಾ ಬಳಿಯಲ್ಲಿ ಸರಕಾರ ಕೊಟ್ಟ 3.5 ಸೆನ್ಸ್ ಜಾಗದಲ್ಲಿ ಚಿಕ್ಕ ಮನೆ ಕಟ್ಟಿ ವಾಸಿಸುತ್ತಿದ್ದೇನೆ.
ಇತ್ತೀಚೆಗೆ ನನ್ನ ಹಳೇ ಮನೆ ಬೀಳುವ ಸ್ಥಿತಿಯಲ್ಲಿದ್ದರಿಂದ ನಾನು ಅದನ್ನು ತೆರವುಗೊಳಿಸಿ ಹೊಸ ಮನೆ ಕಟ್ಟಲು ಯೋಜನೆ ರೂಪಿಸಿದ್ದೇನೆ. ನನಗೆ ನಾನಿದ್ದ ಜಾಗಕ್ಕೆ ಸಂಬಂಧಿಸಿ 94c ಹಕ್ಕುಪತ್ರ ಸಹಿತ 9/11 ಆಗಿದೆ. ಅದರ ಆಧಾರದಲ್ಲಿ ಬ್ಯಾಂಕು ಸಾಲ ಮಾಡಿ ಹೊಸ ಮನೆ ಕಟ್ಟುತ್ತಿದ್ದೇನೆ.


ಆದರೆ ಸ್ಥಳೀಯ ನಿವಾಸಿಯಾದ ಆದಪ್ಪ ಮಡಿವಾಳ ಮತ್ತು ರೋಹಿತ್ ಮಡಿವಾಳ ಎಂಬವರು ನಾನು ಸರಕಾರ ಕೊಟ್ಟ ಅಧೀಕೃತ ಸ್ಥಳದಲ್ಲಿ ಮನೆ ಕಟ್ಟುವರೇ ವಿನಾಕಾರಣ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ರಸ್ತೆಯ ನೆಪವೊಡ್ಡಿ ನಮ್ಮ ಕೆಲಸಕ್ಕೆ ಅಡ್ಡಿಪಡಿಸಿ ಈಗಾಗಲೇ ಅನಾರೋಗ್ಯ ಪೀಡಿತಳಾದ ನನಗೆ ಮತ್ತಷ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.


ನಾನು ಹೊಸ ಮನೆ ಕಟ್ಟುವಾಗ ಯಾವುದೇ ರಸ್ತೆಗೆ ಹಾನಿ ಮಾಡಿಲ್ಲದಿದ್ದರೂ ರಸ್ತೆ ಅಗೆದಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಮನೆ ಕಾಮಗಾರಿ ನಡೆಸುವ ಸಂದರ್ಭ ನನ್ನ ಮನೆಗೆ ಸುತ್ತ ಹಾಕಿದ್ದ ನಮ್ಮ ಕಂಪೌಂಡ್ ಗೋಡೆಯನ್ನು ತೆರವುಗೊಳಿಸಿದ್ದೇನೆ. ಈ ಕಂಪೌಂಡ್ ನಾನೇ ಖರ್ಚು ಮಾಡಿ ಮಾಡಿದ್ದು ಮುಂದಕ್ಕೆ ಅವಶ್ಯಕತೆ ಇದ್ದಲ್ಲಿ, ನನ್ನ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ನಾನು ಕಂಪೌಂಡ್ ಮಾಡುತ್ತೇನೆ. ನಾನು ಸರಕಾರ ಕೊಟ್ಟ ನಿವೇಶನದಲ್ಲಿ ಮನೆ ಮಾಡುತ್ತಿದ್ದೇನೆ ವಿನ: ಯಾವುದೇ ಸರಕಾರಿ ಜಾಗವನ್ನಾಗಲಿ, ರಸ್ತೆಯನ್ನಾಗಲಿ ಆಕ್ರಮಿಸಿಲ್ಲ ಎಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಯೋವೃದ್ಧಳಾದ ನನಗೆ ಆದಪ್ಪ ಮಡಿವಾಳ ಮತ್ತು ರೋಹಿತ್ ಮಡಿವಾಳ ಎಂಬವರು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಾ, ದೂರು ನೀಡುತ್ತಾ ಹಿಂಸಿಸುತ್ತಿರುವುದು ಅಘಾತ ತಂದಿದೆ. ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ಸಂಬಂಧಪಟ್ಟವರೇ ಹೊಣೆಗಾರರು ಎಂದು ತಿಳಿಸಬಯಸುತ್ತೇನೆ.
ಆದುದರಿಂದ ತಾವು ಈ ಬಗ್ಗೆ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.