ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಇಮ್ತಿಯಾಜ್ ವಾಮದಪದವು ಅವರಿಗೆ ಸನ್ಮಾನ

ವಾಮದಪದವು:
ರಾಷ್ಟ್ರೀಯ ಹಿಂದಿ ದಿವಸ ಪ್ರಯುಕ್ತ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ, ಬಂಟ್ವಾಳ ತಾಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಇಮ್ತಿಯಾಜ್ ವಾಮದಪದವು ಅವರನ್ನು ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.


ಭಡ್ತಿ ಹೊಂದಿದ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಯಾಗಿರುವ ಇಮ್ತಿಯಾಜ್ ಅವರು ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ, ಹಿಂದಿ ಕಲಿಕೆಯ ಬಗ್ಗೆ ಹಲವಾರು ಪ್ರಯೋಗ, ಸಾಧನೆಗಳನ್ನು ಮಾಡಿದವರು.
ರೋಟರಿ ಕ್ಲಬ್ ಕಾರ್ಯದರ್ಶಿ ರಮೇಶ್ ನಾಯಕ್, ಸದಸ್ಯರಾದ ರಾಮಚಂದ್ರ ಶೆಟ್ಟಿಗಾರ್, ರಾಜ ಶಂಕರ್ ಶೆಟ್ಟಿ, ವಿಜಯ್ ಫೆರ್ನಾಂಡಿಸ್, ಶಾಲಿನಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.