ಚಿತ್ರಕಲಾ ಶಿಕ್ಷಕ ಮುರಲಿಕೃಷ್ಣ ರಾವ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಾಮದಪದವು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಮುರಲಿಕೃಷ್ಣ ರಾವ್ ಅವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.


ಮುರಲಿಕೃಷ್ಣ ರಾವ್ ಇವರು ಚಿತ್ರಕಲಾ ಶಿಕ್ಷಕರಾಗಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ತಮ್ಮ ಸಂಸ್ಥೆಯಲ್ಲಿ ಆಸಕ್ತ ಕಲಾ ವಿದ್ಯಾರ್ಥಿಗಳ ಚಿತ್ತಾರ ತಂಡ ರಚಿಸಿ 2002ರಿಂದ ಸತತವಾಗಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುತ್ತಾ ಬಂದವರು.
ಪ್ರತಿವರ್ಷ ನಡೆಯುವ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಗೆ ತಮ್ಮ ಸಂಸ್ಥೆಯ ಹಾಗೂ ಇತರ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವಂತೆ ಪೆÇ್ರೀತ್ಸಾಹಿಸುತ್ತಾ ಬಂದಿರುವ ಇವರು ವಿವಿಧ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಚಿತ್ರಗಳ ಕಾರ್ಯಾಗಾರ ನಡೆಸಿದವರು.
ಹಲವಾರು ಶಾಲೆಗಳು, ಸರಕಾರಿ ಕಚೇರಿಗಳ ಸೌಂದರೀಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು ಪುರಸಭೆ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಿ. ಮೂಡ, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಡ್ತಾಲಬೆಟ್ಟು, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೊಡಂಗೆ, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಅಮ್ಮೆ ಮಾರ್ ಮೊದಲಾದೆಡೆಗಳ ಸೌಂದರೀಕರಣದಲ್ಲಿ ಮುರಲಿಕೃಷ್ಣ ರಾವ್ ಅವರ ಕಲಾನೈಪುಣ್ಯತೆ ಗಮನ ಸೆಳೆಯುವಂತದ್ದು.

ಇವರ ವಿದ್ಯಾರ್ಥಿಗಳು ಎರಡು ಬಾರಿ ಪ್ರತಿಭಾಕಾರಂಜಿಯ ಕ್ಲೇ ಮಾಡೆಲ್ ವಿಭಾಗದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿದ್ದು ಚಿತ್ತಾರ ಕಲಾತಂಡದಿಂದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. 14 ವಿದ್ಯಾರ್ಥಿಗಳು ಕಲಾಕ್ಷೇತ್ರವನ್ನು ತಮ್ಮ ವೃತ್ತಿಯನ್ನಾಗಿಸಿದ್ದು ನಾಲ್ವರು ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.