ಮೂಡುಪಡುಕೋಡಿ ಶಾಲಾ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಾಮದಪದವು: ದ.ಕ.ಜಿ.ಪ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿಯ ಮುಖ್ಯ ಶಿಕ್ಷಕ ಸುನೀಲ್ ಸಿಕ್ವೇರಾ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.


ಸುನಿಲ್ ಸಿಕ್ವೇರಾ ಇವರು ಕಳೆದ 18 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಿಧಾನಗಳ ಮೂಲಕ ಕಲಿಕೆಯನ್ನು ನೀಡುವವರು. ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ರಂಗಭೂಮಿ ಕಲಾವಿದರಾಗಿ, ಸವ್ಯಸಾಚಿ ಶಿಕ್ಷಕರಾಗಿ ಗಮನ ಸೆಳೆದವರು. ಅಧಿಕಾರಿಗಳು, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಭಾಂದವ್ಯದೊಂದಿಗೆ ಶಾಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದವರು.
ಸುನೀಲ್ ಸಿಕ್ವೇರಾ ಅವರು ಶಾಲೆಗೆ ಸುಸಜ್ಜಿತವಾದ ಕಟ್ಟಡ, ಪ್ರವೇಶ ಧ್ವಾರ, ಚಿಣ್ಣರ ಮನೆ, ರಂಗಮಂದಿರ ನಿರ್ಮಾಣ, ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆ, ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಆಯೋಜನೆ ಮೊದಲಾದ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿದವರು.