ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಸಹಭಾಗಿತ್ವದಲ್ಲಿ‌ ಬೆಳೆ ಸಮೀಕ್ಷೆ ತರಬೇತಿ

ಬಂಟ್ವಾಳ: ಕೃಷಿ ಇಲಾಖೆ ಬಂಟ್ವಾಳ, ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಮತ್ತು ದಿಶಾ ಸೇವಾ ಟ್ರಸ್ಟ್ ಕೈಕಂಬ ಆಶ್ರಯದಲ್ಲಿ ರೈತರಿಗಾಗಿ ಬೆಳೆ ಸಮೀಕ್ಷೆ ತರಬೇತಿ ಮತ್ತು ಇಲಾಖಾ ಮಾಹಿತಿ ಕಾರ್ಯಗಾರ ನಡೆಯಿತು.


ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ರೈತರಿಗೆ ಬೆಳೆ ಸಮೀಕ್ಷೆ ಯ ಅಗತ್ಯತೆಯ ಬಗ್ಗೆ ತಿಳಿಸಿದರು
ದಿಶಾ ಟ್ರಸ್ಟಿನ ಸಂಚಾಲಕ ಹೆನ್ರಿ ವಾಲ್ಟರ್, ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಹರ್ಷೇಂದ್ರ ಹೆಗ್ಗಡೆ ಭಾಗವಹಿಸಿದ್ದರು.
ಕೃಷಿ ಅಧಿಕಾರಿ ನಂದನ್ ಶೆಣೈ, ವಿನ್ಯಾಸ, ಸಂಗೀತ ತರಬೇತಿ ಕಾರ್ಯಾಗಾರ ನಡೆಸಿದರು.
ಕ್ಲಬ್ಬಿನ ಸದಸ್ಯ ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು
ಕಾರ್ಯದರ್ಶಿ ರಮೇಶ್ ನಾಯಕ್ ವಂದಿಸಿದರು.