ಮೂಡುಪಡುಕೋಡಿ ಶಾಲೆ, ಎಸ್ ಡಿಎಂಸಿ ಸದಸ್ಯ ಸ್ಥಾನಗಳಿಗೆ ಚುನಾವಣೆ

ಯುವಧ್ವನಿ ನ್ಯೂಸ್

ಬಂಟ್ಚಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತು ವ್ಯಾಪ್ತಿಯ ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿಎಂಸಿಗೆ ಚುನಾವಣೆ ಮೂಲಕ ಕೆಲವು ಸದಸ್ಯರ ಆಯ್ಕೆ ನಡೆಯಿತು.
ಮೀಸಲಾತಿ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು ಹೆಚ್ಚು ಮತ ಪಡೆದ ಆಧಾರದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸುರೇಶ್ ಕಯ್ಯಾಬೆ ಆಯ್ಕೆ:

ನಂತರ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸುರೇಶ್ ಕೈಯಾಬೆ ಅಧ್ಯಕ್ಷರಾಗಿ ಮತ್ತು ಶಾಲಿನಿ ಕೋಂ ಯತೀಶ್ ಪೂಜಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ದಿನೇಶ್ ಶೆಟ್ಟಿ, ನವೀನ್ ಶೆಟ್ಟಿ, ಹರೀಶ್ ಪೂಜಾರಿ, ಶ್ರೀನಿವಾಸ ಪೂಜಾರಿ, ಬಬಿತ, ಸೇಸಪ್ಪ, ಲೋಕೇಶ್ ನಾಯ್ಕ್ ಎರ್ಮೆನಾಡು, ಇಬ್ರಾಹಿಂ, ಬದ್ರುದ್ದೀನ್, ಮಸುದ, ಅಸ್ಮ, ಜೂಲಿಯನ್ ರೊಡ್ರಿಗಸ್, ಮೀನಾಕ್ಷಿ, ರೇವತಿ, ಪುಷ್ಪವತಿ, ವಿಜಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.