ಕೊಯಿಲದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಯುವಧ್ವನಿ ನ್ಯೂಸ್

ಕೊಯಿಲ: ನೆಹರು ಯುವ ಕೇಂದ್ರ ಮಂಗಳೂರು ಮತ್ತು
ಗುರು ಗಣೇಶ್ ಯುವಕ ಮಂಡಲ ಕೊಯಿಲ ಆಶ್ರಯದಲ್ಲಿ ವಿಶ್ವ ಕೌಶಲ್ಯ-ದಿನ-2021 ಅಂಗವಾಗಿ ಕೊಯಿಲ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಭಾನುವಾರ ನಡೆಯಿತು. ಗುರುಗಣೇಶ್ ಯುವಕ ಮಂಡಲದ ಅದ್ಯಕ್ಷ ಸಚ್ಚಿದಾನಂದ ಕೊಯಿಲ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜೀವನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಚಟುವಟಿಕೆಗಳೊಂದಿಗೆ ತರಬೇತಿ ನೀಡಿದರ


ನೆಹರು ಯುವ ಕೇಂದ್ರದ ಬಂಟ್ವಾಳ ತಾಲೂಕು ಸಂಯೋಜಕ ಆಶಿಶ್ ಅಜ್ಜಿಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.


ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ ಆನಂದ, ಪಂಚಾಯತು ಸದಸ್ಯರುಗಳಾದ ಸಂತೋಷ್ ರಾಯಿ ಬೆಟ್ಟು, ದಿನೇಶ್ ಶೆಟ್ಟಿ ಮಡಂದೂರು, ಪುಷ್ಪಾವತಿ ಕೊಯಿಲ, ಗುಣವತಿ ನೀರಲ್ಕೆ, ಭಜನಾ ಮಂಡಳಿಯ ಉಪಾಧ್ಯಕ್ಷ ಕೀರ್ತನ್ ಕೊಯಿಲ, ಭಾಂದವ್ಯ ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಕೊಯಿಲ ಉಪಸ್ಥಿತರಿದ್ದರು. ಸಂತೋಷ್ ಜೆ.ಪಿ ಕೊಯಿಲ ಸ್ವಾಗತಿಸಿದರು. ದೀಕ್ಷಿತ್ ಕೊಯಿಲ ವಂದಿಸಿದರು. ಹರ್ಷಿತ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.


……………..
ಗೋಪಾಲ ಅಂಚನ್, ಆಲದಪದವು