ಯಕ್ಷಮಿತ್ರ ಸಿದ್ದಕಟ್ಟೆ ಪ್ರಶಸ್ತಿ ಪ್ರದಾನ: ಕೃತಿ ಬಿಡುಗಡೆ

ಸಿದ್ಧಕಟ್ಟೆ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಕೃತಿ ತಲುಪುವ ಕಾರ್ಯವಾಗಬೇಕು.‌ ವಿವೇಚನ, ಕೃತಿವಿಚಾರ ಹಾಗೂ ವ್ಯಕ್ತಿ ವೈಶಿಷ್ಟ್ಯ ಎಂಬ ಮೂರು ಭಾಗಗಳಲ್ಲಿ ಮೂಡಿ ಬಂದ ಕೈರೋಡಿಯವರ ಬರಹಗಳು ಸಂಕೀರ್ಣ ವಿಷಯ ಮತ್ತು ಸರಳ ನಿರೂಪಣೆಯ ಮೂಲಕ ಮಹತ್ವಪೂರ್ಣವಾದುದು ಎಂದು ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ನುಡಿದರು. ‌
ಸಿದ್ದಕಟ್ಟೆಯ ಯಕ್ಷಮಿತ್ರ ಶ್ರೀ ಕ್ಷೇತ್ರ ಪೂಂಜದ ವತಿಯಿಂದ ನಡೆದ ಸಿದ್ದಕಟ್ಟೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಡಾ‌. ಯೋಗೀಶ ಕೈರೋಡಿಯವರ ‘ ಸಂತೆಯಲ್ಲಿ ಅಕ್ಷರದ ಆನಂದ ‘ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಿದ್ದಕಟ್ಟೆ ಪ್ರಶಸ್ತಿ ಸ್ವೀಕರಿಸಿದ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿ ಮಾತನಾಡಿ ಹುಟ್ಟೂರ ಪ್ರಶಸ್ತಿ ಅಮೂಲ್ಯವಾದುದು, ಪ್ರಶಸ್ತಿ ಕಲಾವಿದನ ಚೈತನ್ಯವನ್ನು ಹೆಚ್ಚಿಸುತ್ತದೆ. ಕಲಾ ಸೇವೆಗೆ ಪ್ರೇರಣೆಯಾಗಿದೆ ಎಂದರು.


ಶ್ರೀಕ್ಷೇತ್ರ ಪೂಂಜದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಯಕ್ಷಗಾನ ತಾಳಮದ್ದಳೆಗೆ ಚಾಲನೆ ನೀಡಿದರು.
ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ, ಕಲಾ ಪೋಷಕ ಸುಬ್ರಹ್ಮಣ್ಯ ಭಟ್, ಎ..ಪಿ ಎಂ‌ಸಿ ಸದಸ್ಯ ಪದ್ಮರಾಜ ಬಲ್ಲಾಳ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ರತ್ನ ಕುಮಾರ್ ಚೌಟ, ಸಂಚಾಲಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ವಿದ್ವಾನ್ ಪ್ರಕಾಶ್ ಆಚಾರ್ಯ, ರಾಮಾಂಜನೇಯ ಕ್ಷೇತ್ರದ ದರ್ಣಪ್ಪ ಶೆಟ್ಟಿ ಪೂವಳ, ಉದ್ಯಮಿ ಕಿರಣ್ ಕುಮಾರ್ ಮಂಜಿಲ ಉಪಸ್ಥಿತರಿದ್ಸರು. ಯೋಗೀಶ್ ಕೈರೋಡಿ ಸ್ವಾಗತಿಸಿ‌ದರು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.‌ ಉಮೇಶ್ ಶೆಟ್ಟಿ ಪಾಲ್ಯ ಸನ್ಮಾನಿತರನ್ನು ಪರಿಚಯಿಸಿದರು.