1800 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಯಶಸ್ವಿ ಅನಿವಾಸಿ ಉಧ್ಯಮಿ, 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿದ ಅಪರೂಪದ ಶಿಕ್ಷಣ ಪ್ರೇಮಿ

ಡಾ.ಅಶ್ರಫ್ ಎಸ್.ಕಮ್ಮಾಡಿ

ದಶಕಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶದತ್ತ ಬದುಕಿನ ಪಯಣಕ್ಕೆ ಮುನ್ನುಡಿ ಬರೆದು, ಅಲ್ಲಿ ಸ್ವಂತ ಉಧ್ಯಮವನ್ನು ಸ್ಥಾಪಿಸಿ ಯಶಸ್ವಿ ಅನಿವಾಸಿ ಉಧ್ಯಮಿಯಾಗಿ ದೇಶ ವಿದೇಶಗಳಲ್ಲಿ
ಗುರುತಿಸಲ್ಪಟ್ಟವರು
ಡಾ.ಅಶ್ರಫ್ ಎಸ್.ಕಮ್ಮಾಡಿ.

ಹೌದು..ಇವರು ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನವರು ಎನ್ನುವುದು ನಮ್ಮ ನಾಡಿನ ಹೆಮ್ಮೆ. ಪುತ್ತೂರು ತಾಲೂಕಿನಲ್ಲಿ ಹುಟ್ಟಿ ಬೆಳೆದ ಅಶ್ರಫ್ ಅವರು ಇಂದು ವಿದೇಶದಲ್ಲಿ ಯಶಸ್ವಿ ಉಧ್ಯಮಿಯಾಗಿರುವ ಜತೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಪರೂಪದ ಸಾಧಕರು.

ಶೈಕ್ಷಣಿಕ ಜೀವನ

ಪುತ್ತೂರು ತಾಲೂಕಿನ ಸಂಪ್ಯದ ಕಮ್ಮಾಡಿ ಎಂಬಲ್ಲಿ ಹಾಜಿ ಎಸ್.ಇಬ್ರಾಹಿಂ ಅವರ ಪುತ್ರನಾಗಿ 1971 ರಲ್ಲಿ ಜನಿಸಿದ ಅಶ್ರಫ್ ಅವರು
ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎ.ಪದವಿ, ಮಂಗಳೂರು ಎಸ್.ಡಿ.ಎಂ.ಲಾ ಕಾಲೇಜಿನಲ್ಲಿ
ಎಲ್.ಎಲ್.ಬಿ. ಪದವಿ ಪೂರೈಸಿದವರು.

ಕಾಲೇಜು ಬದುಕಿನಲ್ಲೇ ರಾಷ್ಟ್ರೀಯ ಸೇವಾ ಯೋಜನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಾಮಾಜಿಕ ಸೇವೆಯ ತುಡಿತವನ್ನು ಮೈಗೂಡಿಸಿಕೊಂಡಿದ್ದ ಆಶ್ರಫ್ ಅವರು ಶಿಕ್ಷಣದ ಬಳಿಕ ವೃತ್ತಿ ಜೀವನದ ಜತೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾದವರು.

ವೃತ್ತಿ ಜೀವನದ ಆರಂಭ

ಆರಂಭದಲ್ಲಿ ತಂದೆಯವರ ಕಮ್ಮಾಡಿ ಪ್ಲೈವುಡ್ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಉದ್ಯೋಗ ಮಾಡುವುದರ ಜತೆಯಲ್ಲಿ ಕೃಷಿ, ರಿಯಲ್ ಎಸ್ಟೇಟ್ ಉಧ್ಯಮದಲ್ಲೂ ತೊಡಗಿಸಿಕೊಂಡವರು.

ಹಲವು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಸೇವಾಕಾರ್ಯಗಳಲ್ಲೂ ಮುಂಚೂಣಿಯ ಯುವನಾಯಕರಾಗಿ ಗಮನ ಸೆಳೆದವರು.

ವಿದೇಶ ಪಯಣ

ಸ್ವಾವಲಂಬಿ, ಸ್ವಾಭಿಮಾನದ ಬದುಕಿನ ಕನಸು ಹೊತ್ತ ಅಶ್ರಫ್ ಅವರು ಹತ್ತು ವರ್ಷಗಳ ಹಿಂದೆ ವಿದೇಶ ಪ್ರಯಾಣ ಬೆಳೆಸಿದವರು, ಮತ್ತೆ ಹಿಂತಿರುಗಿ ನೋಡಿದವರಲ್ಲ. ತನ್ನ ವಿಶೇಷ ಪ್ರಯತ್ನ, ಅವಿರತ ಶ್ರಮ, ಸಾಧನೆಯ ಹಂಬಲದಿಂದ ವಿದೇಶದಲ್ಲಿ ತನ್ನದೇ ಆದ ಸ್ವಂತ ಉಧ್ಯಮವನ್ನು ಆರಂಭಿಸಿ ಮುನ್ನಡೆದವರು.

ಡೈಮಂಡ್ & ಬೇಸ್ ಮೆಟಲ್ ಗಣಿಕಾರಿಕೆ ಉಧ್ಯಮವನ್ನು ವಿದೇಶಿ ನೆಲದಲ್ಲಿ ಸ್ಥಾಪಿಸಿ ಹಂತಹಂತವಾಗಿ ವಿಸ್ತರಿಸುತ್ತಾ, ಯಶಸ್ವಿ ಉಧ್ಯಮಿಯಾಗಿ ಗಮನ ಸೆಳೆದವರು.

ಅಶ್ಕೋ ಡೈಮಂಡ್ಸ್ ಹೆಸರಿನ ಸಂಸ್ಥೆಯ ವಿವಿಧ ಘಟಕಗಳನ್ನು ಝಾಂಬಿಯಾ, ಬೆಹರೈನ್, ಹಾಂಕ್ ಕಾಂಗ್ ಮೊದಲಾದ ದೇಶಗಳಲ್ಲಿ ಆರಂಭಿಸಿ ಉಧ್ಯಮ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡರು.

ಉಧ್ಯಮ ಕ್ಷೇತ್ರದ ಪ್ರಯಾಣದ ಕಡಿಮೆ ಅವಧಿಯಲ್ಲಿಯೇ ಗರಿಷ್ಠ ಸಾಧನೆಗೈದು ವಿದೇಶ ಸಹಿತ ತಾಯ್ನಾಡಿನ ನೆಲದಲ್ಲಿ ಯಶಸ್ವಿ ಅನಿವಾಸಿ ಉಧ್ಯಮಿಯೆಂಬ ಹೆಗ್ಗಳಿಕೆಗೆ ಪಾತ್ರರಾದವರು ಅಶ್ರಫ್ ಕಮ್ಮಾಡಿಯವರು.

ಉಧ್ಯಮದ ಜವಾಬ್ಧಾರಿಗಳು

ಪ್ರಸ್ತುತ ಝಾಂಬಿಯ ಲುಸಾಕ ಅಶ್ಕೋ ಡೈಮಂಡ್ಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರಾಗಿ, ಚೆಯರ್ ಮ್ಯಾನ್ ಆಗಿರುವ ಅಶ್ರಫ್ ಕಮ್ಮಾಡಿಯವರು
ಬೆಹರೈನ್ ಮನಾಮದಲ್ಲಿರುವ ಅಶ್ಕೋ ಬಿಸಿನೆಸ್ ಗ್ರೂಫ್ ಸಂಸ್ಥೆಯ ಚೆಯರ್ ಮ್ಯಾನ್, ಹಾಂಗ್ ಕಾಂಗ್ ನಲ್ಲಿರುವ ಅಶ್ಕೋ ಇನ್ ವೆಸ್ಟ್ ಮೆಂಟ್ ಲಿಮಿಟೆಡ್ ನ ಡೈರೆಕ್ಟರ್ ಆಗಿ ಸೇವಾ ನಿರತರು.
ಉಧ್ಯಮ ಕ್ಷೇತ್ರದಲ್ಲಿ ತನ್ನ ಸ್ವಜಿಲ್ಲೆಗೂ ಸೇವೆ ನೀಡಬೇಕೆಂಬ ಉದ್ಧೇಶದಿಂದ ಮಂಗಳೂರಿನಲ್ಲಿರುವ
ನಾಗಶ್ರೀ ಗಾರ್ಡ್ಸ್ ಸಂಸ್ಥೆಯಲ್ಲಿ ಪಾಲುದಾರರಾಗಿಯೂ ತೊಡಗಿಸಿಕೊಂಡವರು.
ತನ್ನ ಉಧ್ಯಮ ಸಂಸ್ಥೆಗಳ ಮೂಲಕ 1800 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ನೀಡುತ್ತಾ ಬದುಕಿಗೆ ಬೆಳಕಾದವರು.

ಸೇವಾ ಕಾರ್ಯಗಳು

ಅಶ್ರಫ್ ಅವರ ಸಾಧನೆ ಉಧ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸಕ್ರೀಯರಾಗಿ ಸಾಮಾಜಿಕ ಪ್ರಗತಿಗೆ ಅಶ್ರಫ್ ಅವರು ನೀಡಿದ ಕೊಡುಗೆಯು ಅಪಾರವಾದುದು.
ಪುತ್ತೂರು ತಾಲೂಕಿನ ಹಲವು ಶಾಲೆಗಳ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸಿರುವುದರ ಜತೆಯಲ್ಲಿ ಅನೇಕ ಶಾಲೆಗಳಿಗೆ ಬಿಸಿಯೂಟದ ಸಲಕರಣೆಗಳನ್ನು ಒದಗಿಸಿದ್ದಾರೆ. ಶಾಲಾ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ಬೇಕಾದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ.
ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುವುದು, ಸಂಕಷ್ಟದಲ್ಲಿರುವವರ ಕಷ್ಟಕ್ಕೆ ಸ್ಪಂಧಿಸುವುದು, ಸಾಮಾಜಿಕ/ಧಾರ್ಮಿಕ/ಶೈಕ್ಷಣಿಕ/ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದನ್ನು ಅಶ್ರಫ್ ಅವರು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ರೆಡ್ ಕ್ರಾಸ್ ಮತ್ತು ಒಲಿಂಪಿಕ್ ಎಸೋಶಿಯೇಶನ್ ಸಂಸ್ಥೆಗಳ ಸದಸ್ಯರಾಗಿಯೂ ಗಮನಾರ್ಹ ಸೇವೆ ನೀಡಿದವರು.

ದೊರೆತ ಪ್ರಶಸ್ತಿಗಳು

ಅಶ್ರಫ್ ಅವರ ಉಧ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪ್ರಾಪ್ತವಾಗಿರುವ ಪ್ರಶಸ್ತಿ, ಸನ್ಮಾನಗಳು ಹಲವಾರು.
ಯೂರೋಪಿನ ನ್ಯೂ ಏಜ್ ಇಂಟರ್ ನ್ಯಾಶನಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ,
ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಂದ ಸಮಾಜ ಸೇವಾರತ್ನ ಪ್ರಶಸ್ತಿ,
ಕಲ್ಕತ್ತದಲ್ಲಿ ನಡೆದ ವಿವಿಯ ಅಂತರಾಷ್ಟ್ರೀಯ ಘಟಿಕೋತ್ಸವದಲ್ಲಿ ರಾಮಕೃಷ್ಣ ಮಿಷನಿನ ಸ್ವಾಮಿ ಚೇತನಾಂದ ಮಹಾರಾಜರಿಂದ ಹೆಲ್ತ್ ಎಕ್ಸಲೆನ್ಸಿ ಎವಾರ್ಡ್ ಮೊದಲಾದವುಗಳು ಅಶ್ರಫ್ ಅವರ ಸಾಧನೆಯ ಹಾದಿಯಲ್ಲಿನ ಪ್ರಮುಖ ಪ್ರಶಸ್ತಿಗಳಾಗಿ ಗಮನ ಸೆಳೆದಿದೆ.
ನಾಡಿನ ವಿವಿಧ ಸಂಘಟನೆಗಳಿಂದ ಸನ್ಮಾನ, ಪುರಸ್ಕಾರಗಳು ದೊರೆತಿದೆ. ಅಶ್ರಫ್ ಅವರ ಉಧ್ಯಮ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಧನೆಯ ಬಗ್ಗೆ ನಾಡಿನ
ವಿವಿಧ ಮಾಧ್ಯಮಗಳಲ್ಲಿ ಶ್ಲಾಘನೀಯ ಲೇಖನಗಳು ಪ್ರಕಟಗೊಂಡಿದೆ.
ಕರ್ತವ್ಯದಲ್ಲಿ ದಕ್ಷತೆ, ಸೇವೆಯಲ್ಲಿ ಪ್ರಾಮಾಣಿಕತೆ, ವ್ಯಕ್ತಿತ್ವದಲ್ಲಿ ಸನ್ನಡತೆಯನ್ನು ಮೈಗೂಡಿಸಿಕೊಂಡಿರುವ ಸರಳ ಸಜ್ಜನಿಕೆಯ ಸ್ನೇಹಜೀವಿ ಡಾ.ಅಶ್ರಫ್ ಎಸ್.ಕಮ್ಮಾಡಿಯವರ ಸಾಧನೆ ಮಾದರಿಯಾದುದು, ಅಮೋಘವಾದುದು.

ಲೇಖನ:

ಗೋಪಾಲ ಅಂಚನ್
ಪತ್ರಕರ್ತರು