ಕಕ್ಯಪದವು: ಬ್ರಹ್ಮಬೈದರ್ಕಳ ಜಾತ್ರೋತ್ಸವ

ಬಂಟ್ವಾಳ: ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿಯಲ್ಲಿ ಫೆ.14 ರಿಂದ ಫೆ.17 ರವರೆಗೆ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ನಡೆಯಲಿದೆ.


ಫೆ.14ರಂದು ಸಂಜೆ ಭಂಡಾರ ಬರುವುದು, ದ್ವಜಾರೋಹಣ, ಗ್ರಾಮ ಸಂಕ್ರಾಂತಿ ಸೇವೆ, ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ದೈವಂಕುಲ ನೇಮೋತ್ಸವ ನಡೆಯಲಿದೆ.
ಫೆ. 15 ರಂದು ಸಂಜೆ ಯಕ್ಷಗಾನ ಹಾಸ್ಯ ನಾಟ್ಯ ವೈಭವ, ಕಡಂಬಿಲ್ತಾಯಿ ಕೊಡಮಣಿತ್ತಾಯಿ ದೈವಗಳ ಬಲಿ ಮತ್ತು ನೇಮೋತ್ಸವ, ಫೆ.16ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಕೆ.ಹರೀಶ್ ಕುಮಾರ್ ಮತ್ತಿತರರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ರಾತ್ರಿ ಬೈದೆರ್ಲು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ನೇಮೋತ್ಸವ, ತುಳು ನಾಟಕ ಪ್ರದರ್ಶನ ನಡೆಯಲಿದೆ.
ಫೆ.17ರಂದು ಬೆಳಿಗ್ಗೆ ಕೊಡಮಣಿತ್ತಾಯಿ ಸಾನಿಧ್ಯದಲ್ಲಿ ಹೂವಿನ ಪೂಜೆ ನಂತರ ಕೊಡಮಣಿತ್ತಾಯಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತು ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.