ಹೊಸಪಟ್ಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಆಪ್ತಿ ಪೂಜಾರಿಗೆ ಸನ್ಮಾನ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬೆಳ್ತಂಗಡಿ: ಯುವಕರು ಸಂಘಟಿತರಾಗಿ ರಚನಾತ್ಮಕವಾದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಸರಕಾರ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಇವೆಲ್ಲವೂ ಅರ್ಹ ಫಲಾನುಭವಿಗಳಿಗೆ ದೊರೆಯುವಲ್ಲಿಯೂ ಯುವಕರ ಪಾತ್ರ ಮಹತ್ತರವಾದುದು ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಧರಣೇಂದ್ರ ಕುಮಾರ್ ಹೇಳಿದರು.
ಬಜಿರೆ ಗ್ರಾಮದ ಹೊಸಪಟ್ಣ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಆಶ್ರಯದಲ್ಲಿ ನಡೆದ 45ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು
.

ಆಪ್ತಿ ಪೂಜಾರಿಗೆ ಸನ್ಮಾನ:

ಇದೇ ಸಂದರ್ಭ ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ರ ಸ್ಪರ್ಧಾಳು ಆಪ್ತಿ ಬಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಹೊಸಪಟ್ಣ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹೊಸಪಟ್ಣ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಹೊಸಪಟ್ಣ ವತಿಯಿಂದ ಆಪ್ತಿ ಪೂಜಾರಿಯವರನ್ನು ಗೌರವಿಸಲಾಯಿತು.

ವಿದ್ಯಾರ್ಥಿ ವೇತನ ವಿತರಣೆ:

ಶಿಕ್ಷಣ ಪ್ರೇಮಿ ದಿ. ಕೋಟ್ಯಪ್ಪ ಪೂಜಾರಿ ಮತ್ತು ಲೋಕಮ್ಮ ದಂಪತಿ ಗೌರವಾರ್ಥವಾಗಿ ಬೆಂಗಳೂರು ಎಚ್.ಎ.ಎಲ್ ನ ಹರೀಶ್ಚಂದ್ರ ಅವರ ವತಿಯಿಂದ ಹೊಸಪಟ್ಣ ಶಾಲಾ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಜಿ.ಪಂ.ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿಗಳಾದ ಕಿರಣ್ ಕುಮಾರ್ ಮಂಜಿಲ, ಶೇಖರ್ ಪೂಜಾರಿ ಅಗಲ್ದೋಡಿ, ವಾಮದಪದವು ಬಿಲ್ಲವ ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ತುಂಬೆದಲೆಕ್ಕಿ ಗುಂಡೂರಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪಿ.ರಮೇಶ್ ಪೂಜಾರಿ ಪಡ್ಡಾಯಿಮಜಲು, ವೇಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಕೊಪ್ಪದಬಾಕಿಮಾರು, ವೇಣೂರು-ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ಹೆಚ್.ನಿತೀಶ್ ಕೋಟ್ಯಾನ್, ಆರಾದನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್ ಮೊದಲಾದವರು ಅತಿಥಿಗಳಾಗಿ ಶುಭ ಹಾರೈಸಿದರು.

ಅಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಗಣೇಶ್ ಪೂಜಾರಿ ಹೊಸಪಟ್ಣ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಸಮಿತಿ ಗೌರವಾಧ್ಯಕ್ಷ ಪದ್ಮನಾಭ ರೈ ಬ್ರಾಣಿಗೇರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್ಕುಮೇರು, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್ಕುಮೇರು, ಭಜನಾ ಮಂಡಳಿ ಅಧ್ಯಕ್ಷ ಗೋಪಾಲ ಟೈಲರ್ ಹೊಸಪಟ್ಣ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಪೂಜೋತ್ಸವ, ಅನ್ನಸಂತರ್ಪಣೆ, ಅಂಗನವಾಡಿ ಮತ್ತು‌ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ನಂತರ ತುಳು ನಾಟಕ ನಡೆಯಿತು.