ವಾಮದಪದವು: ಡಿಗ್ರಿ ಕಾಲೇಜಿನಲ್ಲಿ ಪತ್ರಿಕಾ ವರದಿಗಾರಿಕೆ ಕಲೆ ತರಬೇತಿ ಕಾರ್ಯಗಾರ (ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ವಾಮದಪದವು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಪತ್ರಿಕಾ ವರದಿಗಾರಿಕೆ ಕಲೆ ತರಬೇತಿ ಕಾರ್ಯಗಾರ ನಡೆಯಿತು.
ಕಾಲೇಜಿನ ಆಂತರಿಕ ಭರವಸ ಕೋಶ ಮತ್ತು ಸಮಾಜಕಾರ್ಯ ವೇದಿಕೆ ಸಂಯೋಜಿತ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಹೆಚ್‌.ಬಿ., ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಸಂಘಟನಾ ಕೌಶಲ್ಯಗಳಿವೆ. ಆದರೆ ಅವುಗಳನ್ನು ಸರಿಯಾಗಿ ದಾಖಲೀಕರಣ ಅಥವಾ ವರದಿ ತಯಾರಿಸುವಲ್ಲಿ ಸಂಪೂರ್ಣ ಜ್ಞಾನವನ್ನು ಪಡೆಯಲು ಇಂತಹ ಕಾರ್ಯಗಾರಗಳು ಅತ್ಯವಶ್ಯಕ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಪತ್ರಕರ್ತ ಗೋಪಾಲ ಅಂಚನ್ ಕಾರ್ಯಾಗಾರ ನಡೆಸಿಕೊಟ್ಟರು ಸುಮಾರು 65ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮೇರಿ ಎಂ. ಜೆ, ಉಪನ್ಯಾಸಕರುಗಳಾದ ರಶ್ಮಿ ಕುಮಾರಿ, ಭವ್ಯ ಶೆಟ್ಟಿ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಉದಯ್ ಕುಮಾರ್ ಸಿ.ಆರ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸ್ವಾತಿ ಪ್ರಾರ್ಥಿಸಿದರು. ಸಂಯೋಜಕ ಪ್ರೊ. ಜಯರಾಮ್ ವಂದಿಸಿದರು.