ಮಾರ್ಚ್ 2ರಂದು ಅದ್ಧೂರಿ, ಆಕರ್ಷನೀಯ “ಬಂಟ್ವಾಳ ಕಂಬಳ”, ಹಲವು ವಿಶೇಷತೆ-ಭರದ ಸಿದ್ಧತೆ( ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ 13ನೇ ವರ್ಷದ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳ”ಬಂಟ್ವಾಳ ಕಂಬಳ” ಮಾರ್ಚ್ 2ರಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿದ್ದು ಭರದ ಸಿದ್ಧತೆ ನಡೆಯುತ್ತಿದೆ ಎಂದು ಮಾಜಿ ಸಚಿವ, ಕಂಬಳ ಕೂಟದ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಅವರು ಕಂಬಳದ ಬಗ್ಗೆ ವಿವರಣೆ ನೀಡಿದರು.
ಹತ್ತು ವರ್ಷ ಎನ್ ಸಿ ರೋಡಿನಲ್ಲಿ ಮಾದರಿ ಕಂಬಳವಾಗಿ ರಾಷ್ಟ್ರದ ಗಮನ ಸೆಳೆದ ಮೂಡೂರು ಪಡೂರು ಕಂಬಳ ಕಳೆದ ಮೂರುವರ್ಷಗಳಿಂದ ನಾವೂರು ಕೂಡಿಬೈಲುನಲ್ಲಿ ಬಂಟ್ವಾಳ ಕಂಬಳವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ.
ಈ ಬಾರಿ ಪ್ರತ್ಯೇಕ ವಿಐಪಿ ವೇದಿಕೆ, ವಿಶಾಲವಾದ ಭವ್ಯ ವೇದಿಕೆ, ರಸ್ತೆ ಅಗಲೀಕರಣ, ಬಹುಮಾನವನ್ನು 2 ಪವನ್ ಗೆ ಹೆಚ್ಚಳಕ್ಕೆ ಆಧ್ಯತೆ ನೀಡಲಾಗಿದ್ದು ಪ್ರತಿವರ್ಷ ಒಂದಲ್ಲೊಂದು ಹೊಸ ಅವಿಷ್ಕಾರದೊಂದಿಗೆ ಬಂಟ್ವಾಳ ಕಂಬಳ ಗಮನ ಸೆಳೆಯುತ್ತದೆ ಎಂದು ರೈ ಹೇಳಿದರು.
ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಚರ್ಚ್ ಧರ್ಮಗುರು ಫೆಡ್ರಿಕ್ ಮೊಂತೆರೋ ಉದ್ಘಾಟಿಸುವರು. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಹಿತ ರಾಜ್ಯದ ಸಚಿವರು, ಶಾಸಕರುಗಳು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವರು.
ಕಂಬಳ ಕೂಟದ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಫ್ ಫ್ರೆಂಕ್, ಉಪಾಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಎಂ.ಎಸ್.ಮಹಮ್ಮದ್, ಅವಿಲ್ ಮೆನೇಜಸ್, ಪದಾಧಿಕಾರಿಗಳಾದ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಶಬೀರ್ ಸಿದ್ಧಕಟ್ಟೆ, ಉಮೇಶ್ ಕುಲಾಲ್, ರಾಜೇಶ್ ರೊಡ್ರಿಗಸ್, ಪ್ರವೀಣ್ ರೊಡ್ರಿಗಸ್, ಪ್ರಕಾಶ್ ಆಳ್ವ, ಲೆಸ್ಸನ್ ರೊಡ್ರಿಗಸ್, ಜನಾರ್ಧನ ಚೆಂಡ್ತಿಮಾರ್, ಸೀತಾರಾಮ ಶಾಂತಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.