ಪಿಲಿಮೊಗರು-ವಾಮದಪದವಿನಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟನೆ

ಬಂಟ್ವಾಳ: ಕರ್ಣಾಟಕ ಬ್ಯಾಂಕಿನ 907ನೇ ಶಾಖೆ ಮತ್ತು ಮಿನಿ ಇ-ಲಾಬಿಯು ಪಿಲಿಮೊಗರು ಗ್ರಾಮದ ವಾಮದಪದವು ಕಳಸಡ್ಕ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ಚೆನ್ನೈತ್ತೋಡಿ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ಸೇವೆಗೆ ಹೆಸರಾಗಿರುವ ಕರ್ನಾಟಕ ಬ್ಯಾಂಕಿನ ಈ ನೂತನ ಶಾಖೆಯಿಂದ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲಿದೆ ಎಂದರು.

ಡಾ. ರವಿ ಎನ್.ಶರ್ಮ ಮಿನಿ ಇ-ಲಾಬಿ ಉದ್ಘಾಟಿಸಿ ಶುಭ ಹಾರೈಸಿದರು.

ಬ್ಯಾಂಕಿನ ಜನರಲ್ ಮ್ಯಾನೇಜರ್ ಜಯನಾಗರಾಜ ರಾವ್ ಎಸ್.ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಬ್ಯಾಂಕು ಗ್ರಾಹಕ ಬಂಧುಗಳ ಸಹಕಾರದಿಂದ ಆರಂಭದಿಂದ ಇದುವರೆಗೂ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಗ್ರಾಹಕ ಸ್ನೇಹಿಯಾಗಿ ಮುನ್ನಡೆಯುತ್ತಿರುವ ಕರ್ನಾಟಕ ಬ್ಯಾಂಕು ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ವರ್ಷವಿಡೀ ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೀಗ ವಾಮದಪದವಿನ ಶಾಖೆಯ ಮೂಲಕ ಈ ಪರಿಸರದ ಜನತೆಗೆ ಎಲ್ಲಾ ರೀತಿಯ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ನೀಡಲು ನಮ್ಮ ಬ್ಯಾಂಕು ಬದ್ಧವಾಗಿದೆ ಎಂದು ಜಯನಾಗರಾಜ ರಾವ್ ಹೇಳಿದರು.

ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡ್ಯಾನಿಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಂಟ್ವಾಳ ಮೂಡ ಶಾಖಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು. ವಾಮದಪದವು ಶಾಖೆಯ ಶಾಖಾಧಿಕಾರಿ ಹರಿಕೃಷ್ಣ ನಾಯ್ಕ್ ವಂದಿಸಿದರು. ಆಶಾ ಜಿ.ಕಾರ್ಯಕ್ರಮ ನಿರೂಪಿಸಿದರು.

ಕಟ್ಟಡದ ಮಾಲಕರಾದ ನೋಣಯ್ಯ ಬಂಗೇರಾ, ಭವಾನಿ, ಪ್ರಪುಲ್ಲ ಕುಂದರ್, ಹರೀಶ್ ಸಾಲ್ಯಾನ್, ಯೋಗೀಶ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318