ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ-ಚಿಕ್ಕ ಮೇಳದ ಯಕ್ಷಗಾನ ತಿರುಗಾಟ ಆರಂಭ

ಬಂಟ್ವಾಳ: ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಚಿಕ್ಕ ಮೇಳದ ಯಕ್ಷಗಾನ ತಿರುಗಾಟಕ್ಕೆ ಬುಧವಾರ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ದೊರೆತಿದೆ.ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿಂತಾಯ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಿಕ್ಕ ಮೇಳಕ್ಕೆ ಪ್ರಸಾದ ನೀಡಿ ಚಾಲನೆ ನೀಡಿದರು.

ಚಿಕ್ಕಮೇಳದ ವ್ಯವಸ್ಥಾಪಕ, ಹಿರಿಯ ಯಕ್ಷಗಾನ ಕಲಾವಿದ ವಿ.ಮನೋಹರ್ ಕುಮಾರ್ ಮಾತನಾಡಿ ಕಲಾವಿದರನ್ನು ಪ್ರೋತ್ಸಾಹಿಸುವುದು, ಕಲಾವಿದರ ಕಲಿಕೆಗೆ ಅವಕಾಶ ನೀಡುವುದು ಮತ್ತು ಯಕ್ಷಗಾನ ಸೇವೆಯ ದೃಷ್ಠಿಯಿಂದ ಈ ತಿರುಗಾಟ ನಡೆಸಲಾಗುತ್ತಿದೆ. ಕಳೆದ ವರ್ಷ 70 ದಿನ ತಿರುಗಾಟ ನಡೆಸಿ ಕ್ಷೇತ್ರದಲ್ಲಿ ನವರಾತ್ರಿ ಸಂದರ್ಭ ಏಳು ದಿನಗಳ ಯಕ್ಷಗಾನ ಸಪ್ತಾಹ ನಡೆಸಲಾಗಿದೆ ಎಂದರು.

Noಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಬಂಗೇರಾ, ಸಮಿತಿ ಪ್ರಮುಖರಾದ ಶ್ಯಾಮಪ್ರಸಾದ ಪೂಂಜ, ಮೋಹನದಾಸ ಗಟ್ಟಿ ಪೊರಿಗುಡ್ಡೆ, ಚಂದ್ರಶೇಖರ ರೈ ಪಡಂತರ ಕೋಡಿ, ರಮಣಿ ಸಿ.ರೈ, ರವಿರಾಮ್ ಶೆಟ್ಟಿ ಕಂಚಾರು, ದಯಾನಂದ ಎರ್ಮೆನಾಡು ಮೊದಲಾದವರಿದ್ದರು.
ಚಿಕ್ಕಮೇಳದ ತಂಡದಲ್ಲಿ ಹಿಮ್ಮೇಳದಲ್ಲಿ ಪ್ರಸಾದ್ ಆಚಾರ್ಯ, ಸಂದೇಶ್ ಬೆಳ್ಳೂರು, ಹರಿಪ್ರಸಾದ್ ಇಚ್ಲಂಪಾಡಿ, ವಿಶ್ವನಾಥ ಆಚಾರ್ಯ, ಮುಮ್ಮೇಳದಲ್ಲಿ ಗಂಗಾಧರ ಜೋಗಿ ಪುತ್ತೂರು, ವಿಜಯ ಗಾಣಿಗ ಇದ್ದಾರೆ. ವಸಂತ್ ಕುಮಾರ್ ಮತ್ತು ಮನೋಜ್ ಕುಮಾರ್ ಸಹಕರಿಸುತ್ತಿದ್ದಾರೆ.

✍?ಗೋಪಾಲ ಅಂಚನ್ ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್
9449104318