ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 6.91ಲಕ್ಷದ ಜನರೇಟರಿಗೆ ಚಾಲನೆ, ಆರೋಗ್ಯ ಹಿತದೃಷ್ಠಿಯಿಂದ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಡಿ.ಸಿ.ಮತ್ತು ಡಿಎಚ್ಓಗೆ ನಾಗರಿಕರ ಅಭಿನಂದನೆ.

ಬಂಟ್ವಾಳ: ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ನಾಗರಿಕರ ಬಹುಕಾಲದ ಬೇಡಿಕೆಯೊಂದು ಈಡೇರಿದೆ.
ನಾಗರಿಕರ ಆರೋಗ್ಯ ಹಿತದೃಷ್ಠಿಯಿಂದ ಆರೋಗ್ಯ ಕೇಂದ್ರಕ್ಕೆ ಬೇಕಾಗಿದ್ದ ಜನರೇಟರ್ ವ್ಯವಸ್ಥೆ ಇದೀಗ ಚಾಲನೆಗೊಂಡಿದೆ‌.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ರಾಜ್ಯ ವಿಪತ್ತು ತುರ್ತು ನಿರ್ವಹಣಾ ನಿಧಿ ( S.D.E.R.F )ಅನುದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳ ಹೆಚ್ಚಿನ ಮುತುವರ್ಜಿಯಂತೆ
ಸುಮಾರು 6.91 ಲಕ್ಷ ಅನುದಾನ ನೀಡಿದ್ದು ನೂತನ ಜನರೇಟರ್ (62.5 kv) ಸೇವೆಗೆ ಮುಕ್ತವಾಗಿದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಜನರೇಟರ್ ವ್ಯವಸ್ಥೆ ಬೇಕೆಂಬ ಜನರ ಬೇಡಿಕೆಯಂತೆ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ದ.ಕ.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.


ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಇದಕ್ಕಾಗಿ ಶ್ರಮಿಸಿದ ಪದ್ಮನಾಭ ಸಾಮಂತ ಅವರಿಗೆ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.